ಸೌದಿ ಅರೇಬಿಯದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರ‌್ಯಾಪರ್ ನಿಕ್ಕಿ ಮಿನಾಜ್: ವಿರೋಧ-ಬೆಂಬಲ

0
597

ಜಿದ್ದ,ಜು.5: ಸೌದಿ ಅರೇಬಿಯದ ಮನೊರಂಜನಾ-ಸಾಂಸ್ಕೃತಿಕ ಕಾರ್ಯಕ್ರಮದ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಲಾಗಿದ್ದು ಜಿದ್ದ ಕಲ್ಚರಲ್ ಫೆಸ್ಟಿವಲ್‍ನಲ್ಲಿ ಪ್ರಮುಖ ರ‌್ಯಾಪರ್ ನಿಕ್ಕಿ ಮಿನಾಜ್ ಭಾಗವಹಿಸಲಿದ್ದಾರೆ. ಬುಧವಾರ ಕಾರ್ಯಕ್ರಮ ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ಈ ವಿವರವನ್ನು ನೀಡಿದ್ದಾರೆ. ಜುಲೈ ಹದಿನೆಂಟರಂದು ಕಾರ್ಯಕ್ರಮ ನಡೆಯಲಿದೆ. ಈ ಹಿಂದೆ ಸೌದಿಯಲ್ಲಿ ಇಂತಹ ಸ್ಟೇಜ್ ಶೋಗಳು, ಲೈವ್ ಮ್ಯೂಸಿಕ್ ಫೆಸ್ಟಿವಲ್‍ಗಳಿಗೆ ನಿಷೇಧ ಹೇರಲಾಗಿತ್ತು. ಆದರೆ ವಿಷನ್ 2030 ಯೋಜನೆಯ ಭಾಗವಾಗಿ ಈ ನಿಷೇಧಗಳನ್ನು ಸೌದಿ ಸರಕಾರ ರದ್ದು ಪಡಿಸಿದೆ. ನಂತರ ಸಿನೆಮಾ ಪ್ರದರ್ಶನ ಕೂಡ ಆರಂಭವಾಗಿತ್ತು.

ನಿಕ್ಕಿಮಿನಾಜ್ ಅಶ್ಲೀಲ ಸಂಗೀತ ಅಲ್ಬಂಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಅಲ್ಬಂಗಳಲ್ಲಿ ಲೈಂಗಿಕತೆಯ ಅತಿಪ್ರಸಾರ ನಡೆಯುತ್ತದೆ. ಆದ್ದರಿಂದ ಸೌದಿ ಅರೇಬಿಯದಲ್ಲಿ ಈ ಕಾರ್ಯಕ್ರಮ ಆಯೋಜಿಸುವುದನ್ನು ಹಲವಾರು ಮಂದಿ ವಿರೋಧಿಸಿದ್ದಾರೆ. ಇನ್ನು ಹಲವಾರು ಮಂದಿ ಬೆಂಬಲಿಸಿದ್ದಾರೆ. ಮಹಿಳೆಯರು ತಲೆಮುಚ್ಚುವುದು ಕಡ್ಡಾಯ ಇರುವ ಇಲ್ಲಿ ಮಿನಾಜ್‌ರಂತಹವರ ರ‌್ಯಾಪ್ ಕಾರ್ಯಕ್ರಮವನ್ನು ಹೇಗೆ ಅಂಗೀಕರಿಸಲು ಸಾಧ್ಯ ಎಂದು ಸ್ವದೇಶಿ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸುತ್ತಿದ್ದಾರೆ.