ತೆಲಂಗಾಣದಾದ್ಯಂತ ಮುಸ್ಲಿಂ ರಾಷ್ಟ್ರೀಯ ಮಂಚ್‍ನ ಶಾಖೆ ತೆರೆಯಲು ನಿರ್ಧಾರ: ಆರೆಸ್ಸೆಸ್‌ನಿಂದ ಸದಸ್ಯತ್ವ ಅಭಿಯಾನ

0
1018

ಹೈದರಾಬಾದ್,ಜು.5: ತೆಲಂಗಾಣದಲ್ಲಿ ಬಿಜೆಪಿ ತನ್ನ ಅಸ್ತಿತ್ವಕ್ಕಾಗಿ ಯತ್ನಿಸುತ್ತಿದೆ. ಮುಸ್ಲಿಂ ರಾಷ್ಟ್ರೀಯ ಮಂಚ್‍ನ್ನು ತೆಲಂಗಾಣದಾದ್ಯಂತ ತೆರೆಯಲು ಆರೆಸ್ಸೆಸ್ ನಿರ್ಧರಿಸಿದ್ದು ಜಿಲ್ಲಾ ಪ್ರದೇಶಗಳಲ್ಲಿ ಅದರ ಶಾಖೆಗಳು ಅಸ್ತಿತ್ವಕ್ಕೆ ಬರಲಿದೆ. ಜೊತೆಯಲ್ಲಿ ಸದಸ್ಯತ್ವ ಸೇರ್ಪಡೆ ಅಭಿಯಾನವೂ ನಡೆಯಲಿದೆ.

ಮಂಚ್‍ಗೆ ಸುಮಾರು ನಾಲ್ಕು ವರ್ಷ ಮೊದಲು ಹೈದರಾಬಾದಿನಲ್ಲಿ ಕೇವಲ ಇಬ್ಬರು ಸದಸ್ಯರು ಇದ್ದರು. ಅವರ ಮೂಲಕ ಕಚೇರಿ ತೆರೆಯಲಾಗಿತ್ತು. ಆದರೆ ಈಗ ಮುಸ್ಲಿಂ ರಾಷ್ಟ್ರೀಯ ಮಂಚ್‍ಗೆ ಹೈದರಾಬಾದಿನಲ್ಲಿ ಸುಮಾರು ಮೂರ ಸಾವಿರ ಸದಸ್ಯರಿದ್ದಾರೆ ಎಂದು ಪದಾಧಿಕಾರಿಗಳು ಹೇಳುತ್ತಿದ್ದಾರೆ. ಈ ವರ್ಷಾಂತ್ಯದಲ್ಲಿ ತೆಲಂಗಾಣದಲ್ಲಿ ಹತ್ತು ಸಾವಿರ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಮುಂದಿನ ತಿಂಗಳು ಆಂಧ್ರಪ್ರದೇಶದಲ್ಲಿಯೂ ಕಚೇರಿ ತೆರೆಯಲಾಗುವುದು.

ಮಿಶನ್ 2024 ಯೋಜನೆಯ ಪ್ರಕಾರ ಆರೆಸ್ಸೆಸ್ ತೆಲುಗು ರಾಜ್ಯಗಳಲ್ಲಿ ಮುಸ್ಲಿಮರೊಂದಿಗೆ ಬೆಸೆಯಲು ಕಾರ್ಯಕ್ರಮವನ್ನು ಕೂಡ ಆಯೋಜಿಸುತ್ತಿದೆ. ಆರೆಸ್ಸೆಸ್ ಹಿರಿಯ ನಾಯಕ ರಾಷ್ಟ್ರೀಯ ಮುಸ್ಲಿಂ ಮಂಚ್ ಪೋಷಕ ಇಂದ್ರೇರ್ಶ ಕುಮಾರ್ ರವಿವಾರ ಸಭೆಯನ್ನು ಉದ್ದೇಶಿ ಮಾತಾಡಿದ್ದಾರೆ. ಈ ತಿಂಗಳು ಕೊನೆಯಲ್ಲಿ ಅವರು ತೆಲಂಗಾಣದಕ್ಕೆ ಬರಲಿದ್ದು ಮುಂದಿನ ತಿಂಗಳು ಆಂಧ್ರ ಪ್ರವಾಸ ಮಾಡಲಿದ್ದಾರೆ. 2010ರಲ್ಲಿ ಇಂದ್ರೇಶ್ ಕುಮಾರ್‌ರನ್ನು 2007ರ ಮಕ್ಕ ಮಸೀದಿ ಸ್ಫೋಟ ಪ್ರಕರಣದಲ್ಲಿ ವಿಚಾರಣೆ ನಡೆಸಿತ್ತು. ತನ್ನ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ಕೇಸು ಹಾಕಲಾಗಿದೆ ಎಂದು ಇಂದ್ರೇಶ್ ಕುಮಾರ್ ಹೇಳಿದ್ದರು.