2AC ರೈಲ್ವೆ ಕೋಚ್‌ನಲ್ಲಿ ಇಲಿಗಳ ಕಾಟ ; ಸೀಟು, ನೆಲದಲ್ಲಿ ಇಲಿಗಳು – ವಿಡಿಯೋ ವೈರಲ್

0
337

ಸನ್ಮಾರ್ಗ ವಾರ್ತೆ

ಭಾರತೀಯ ರೈಲ್ವೆ ಸೇವೆಗಳ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದಿನದಿಂದ ದಿನಕ್ಕೆ ದೂರುಗಳು ಹೆಚ್ಚುತ್ತಿವೆ. ಆಹಾರದ ಗುಣಮಟ್ಟ ಮತ್ತು ಶೌಚಾಲಯ ಶುದ್ಧತೆಗೆ ಸಂಬಂಧಿಸಿದ ಆರೋಪಗಳ ನಡುವೆಯೇ, ಇದೀಗ ಸೆಕೆಂಡ್ ಎಸಿ ಕೋಚ್‌ನ ದುಸ್ಥಿತಿಯನ್ನು ತೋರಿಸುವ ಯುವಕನ ಪೋಸ್ಟ್ ವೈರಲ್ ಆಗಿದೆ.

ಪ್ರಶಾಂತ್ ಕುಮಾರ್ ಎಂಬ ಯುವಕ ಸೌತ್ ಬಿಹಾರ್ ಎಕ್ಸ್‌ಪ್ರೆಸ್‌ನಲ್ಲಿ ತಾನು ಎದುರಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. 2000 ರೂಪಾಯಿಗೆ ಟಿಕೆಟ್ ಖರೀದಿಸಿದ ನಂತರ, ಕೋಚ್ ಒಳಗೆ ನುಗ್ಗಿದಾಗ, ಸೀಟು ಮತ್ತು ನೆಲದ ಮೇಲೆ ಇಲಿಗಳು ಓಡುತ್ತಿರುವ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಈ ಸ್ಥಿತಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಅವರು, ರೈಲ್ವೆ ಸೇವೆಗಳ ಕಳಪೆ ನಿರ್ವಹಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

https://x.com/i/status/1897684931070816385

ಈ ಸಮಸ್ಯೆಯನ್ನು ಉಲ್ಲೇಖಿಸಿ, ಅವರು ರೈಲ್ವೆಯ ಸಹಾಯವಾಣಿ ಸಂಖ್ಯೆ 139 ಗೆ ದೂರು ದಾಖಲಿಸಿದರು. ಇದರ ಪ್ರತಿಕ್ರಿಯೆಯಾಗಿ, ರೈಲ್ವೆ ಸಿಬ್ಬಂದಿ ಕೋಚ್‌ಗೆ ಸೊಳ್ಳೆ ನಾಶಕ ಸ್ಪ್ರೇ ಹಾಕಿದರೆಂದು ಅವರು ತಿಳಿಸಿದರು. ಅಲ್ಲದೆ, ನೆಲವನ್ನು ಲೈಸೋಲ್ ಬಳಸಿ ಸ್ವಚ್ಛಗೊಳಿಸಲಾಗಿದ್ದು, ದೂರು ಬಂದ ನಂತರವೇ ಸ್ವಚ್ಛತೆ ಕೆಲಸಗಳು ಪ್ರಾರಂಭವಾಯಿತು ಎಂದು ಯುವಕ ಆರೋಪಿಸಿದರು.

ಪ್ರಶಾಂತ್ ಅವರ ಈ ಪೋಸ್ಟ್ ವೈರಲ್ ಆದ ಬಳಿಕ, ಹಲವರು ತಮ್ಮದೇ ಅನುಭವ ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೆ ಸೇವೆಗಳ ದುಸ್ಥಿತಿಯ ಕುರಿತು ಹಲವು ಕಾಮೆಂಟ್‌ಗಳು ಎದುರಾಗುತ್ತಿದ್ದು, ಪ್ರಯಾಣಿಕರು ಉತ್ತಮ ಸೌಲಭ್ಯಗಳಿಗೆ ಒತ್ತಾಯಿಸುತ್ತಿದ್ದಾರೆ.

https://x.com/pkg196/status/1897684931070816385?t=jbjprsEmXpCCKiBX3SShKw&s=19