ಕೆಲವರ ವಿವೇಚನೆಯಿಲ್ಲದ ಕ್ರಮಗಳು ಆತಂಕ ಸೃಷ್ಟಿಸುತ್ತಿದೆ- ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ

0
670

ಗುವಾಹಟಿ, ಆ. 5: ಕೆಲವು ವ್ಯಕ್ತಿಗಳು, ತಂಡಗಳು ಅಕ್ರಮಾಸಕ್ತ ಮತ್ತು ವಿವೇಚನೆಯಿಲ್ಲದೆ ವರ್ತಿಸುತ್ತಿರುವುದಕ್ಕೆ ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಆತಂಕ ವ್ಯಕ್ತಪಡಿಸಿದ್ದಾರೆ. ದೇಶವನ್ನು ಕಾಯುವ ಸಂಸ್ಥೆಗಳು ಇಂತಹ ಅನಿಯಂತ್ರಿತ ಶಕ್ತಿಗಳನ್ನು ಮೀರಿ ನಿಲ್ಲಬಹುದು ಎಂದು ಭಾವಿಸುತ್ತೇನೆ ಎಂದು ಅವರು ಶುಭ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಗುವಾಹಟಿ ಹೈಕೋರ್ಟಿನ ಆಡಿಟೋರಿಯಂ ಉದ್ಘಾಟಿಸಿ ಮಾತಾಡಿದ ಅವರು, ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಮತ್ತು ಏನನ್ನು ಉದ್ದೇಶಿಸಿ ಹೇಳಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. “ಇಂತಹ ಘಟನೆಗಳು ಅಪಭ್ರಂಶಗಳು ಮಾತ್ರವಾಗಿವೆ. ಅಕ್ರಮಾಸಕ್ತ ವ್ಯಕ್ತಿಗಳು, ಸಂಘಟನೆಗಳ ವಿವೇಚನೆಯಿಲ್ಲದ ವರ್ತನೆಯನ್ನು ಮೀರಿ ನಿಲ್ಲಲು ನಮ್ಮ ಶಕ್ತಿಶಾಲಿ ಸಂಸ್ಥೆಗಳಿಗೆ ಸಾಧ್ಯವಿದೆ. ಇತರ ಸರಕಾರಿ ಕಚೇರಿ, ಇಲಾಖೆಗಳಿಗೆ ಹೋಲಿಸಿದರೆ ನ್ಯಾಯಾಂಗಕ್ಕೆ ವಿಶೇಷತೆಗಳಿವೆ. ಆದ್ದರಿಂದ ಏಕಾಧಿಕಾರ ಶ್ರೇಣಿಯ ರೂಪದಲ್ಲಿ ನ್ಯಾಯಾಂಗಕ್ಕೆ ಸಾಗಲು ಸಾಧ್ಯವಿಲ್ಲ” ಎಂದು ಗೊಗೊಯಿ ಹೇಳಿದರು.