ನಾಂದೇಡ್: ಸರಕಾರಿ ಆಸ್ಪತ್ರೆಯ ವೈದ್ಯರಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಕೊರೋನಾ ರೋಗಿಯ ಸಂಬಂಧಿ

0
422

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದ ವಿವಾದವನ್ನು ಬಗೆಹರಿಸಲು ಯತ್ನಿಸಿದಾಗ ಕೋವಿಡ್ ರೋಗಿಯ ಸಂಬಂಧಿಯೊಬ್ಬರು ವೈದ್ಯರಿಗೆ ಚಾಕುವಿನಿಂದ ಹಲ್ಲೆ ಮಾಡಿದ ವರದಿಯಾಗಿದೆ.

ಆರೋಪಿ ಬಾಹು ಸಾಹೇಬ್ ಗಾಯಕ್ವಾಡ್ ಅವರು ತಮ್ಮ ಸಂಬಂಧಿಯೊಬ್ಬರು ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅವರನ್ನು ಭೇಟಿ ಮಾಡಲು ಹೋದ ವೇಳೆ ವೈದ್ಯರೊಂದಿಗೆ ವಾಗ್ವಾದಕ್ಕಿಳಿದು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.

ಕೋವಿಡ್ ವಾರ್ಡ್ ನಲ್ಲಿದ್ದ ಇತರ ರೋಗಿಗಳ ಕುಟುಂಬಸ್ಥರು ಆರೋಪಿಯು ಕೋವಿಡ್ ವಾರ್ಡ್‌ನೊಳಗೆ ಗದ್ದಲ ಉಂಟು ಮಾಡುತ್ತಿದ್ದನು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೋಪಗೊಂಡು ಕುಟುಂಬಗಳೊಂದಿಗೆ ವಾಗ್ವಾದ ಮುಂದುವರಿಸಿದ್ದನು. ಈ ಮಧ್ಯೆ ವೈದ್ಯರು ಮಧ್ಯ ಪ್ರವೇಶಿಸಿದಾಗ ತನ್ನ ಕೈಯಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ.

ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೈದ್ಯರ ದೂರಿನ‌ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಮುಖೆಡ್ ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here