ಜಾರ್ಜ್ ಫ್ಲಾಯಿಡ್ ಕೊಲೆ: ಪೊಲೀಸ್ ಅಧಿಕಾರಿ ಡೆರಿಕ್ ಶೊವಿನ್ ತಪ್ಪಿತಸ್ಥ- ಕೋರ್ಟ್ ತೀರ್ಪು

0
250

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಮಿನಿಯ ಪೊಲಿಸ್‍ನಲ್ಲಿ ಆಫ್ರೊ ಅಮೆರಿಕನ್ ವಂಶದ ಜಾರ್ಜ್ ಫ್ಲಾಯಿಡ್‍ನ ಕೊಲೆಯಲ್ಲಿ ಅಮಾನಾತಾದ ಪೊಲೀಸ್ ಅಧಿಕಾರಿ ಡೆರಿಕ್ ಶೊವಿನ್ ಅಪರಾಧಿ ಎಂದು ಕೋರ್ಟು ತೀರ್ಪು ನೀಡಿದೆ. ಶೋವಿನ್‍ಗೆ 45 ವರ್ಷ ವಯಸ್ಸು ಈತನ ವಿರುದ್ಧ ಮೂರು ಅಪರಾಧಗಳು ಸಾಬೀತುಗೊಂಡಿದೆ ಎಂದು ಕೋರ್ಟು ಹೇಳಿದೆ.

ಎಂಟು ವಾರದೊಳಗೆ ಶೊವಿನ್‍ರಿಗೆ ಶಿಕ್ಷೆ ತೀರ್ಪು ನೀಡಲಾಗುವುದು. 40 ವರ್ಷ ಜೈಲುಪಾಲಾಗಬೇಕಾದ ನರಹತ್ಯೆ ಅಪರಾಧ ಶೊವಿನ್ ವಿರುದ್ಧ ಹೊರಿಸಲಾಗಿದೆ. ಮಿನಿಯಪೊಲಿಸ್ ಕೋರ್ಟಿನ ಹೊರಗೆ ತೀರ್ಪು ನೀಡುವಾಗ ಅದನ್ನು ಕೇಳಲು ಭಾರೀ ಜನ ಸಂದಣಿ ಸೇರಿತ್ತು. ಕೋರ್ಟು ತೀರ್ಪಿನಲ್ಲಿ ಜನರು ಸಂತೋಷ ಪ್ರಕಟಿಸಿದರು.

19 ವರ್ಷದಿಂದ ಮಿನಿಯ ಪೊಲೀಸ್‍ನಲ್ಲಿ ಶೊವಿನ್ ಪೊಲೀಸಧಿಕಾರಿಯಾಗಿದ್ದಾರೆ. 2020 ಮೇ 25ಕ್ಕೆ ಜಾರ್ಜ್ ಪ್ಲಾಯಿಡ್ ಕೊಲೆ ಪಾತಕ ನಡೆದಿತ್ತು. ನನಗೆ ಉಸಿರುಗಟ್ಟುತ್ತಿದೆ ಎಂದು ಜಾರ್ಜ್ ಫ್ಲಾಯಿಡ್ ಹೇಳಿದರೂ ಶೋವಿನ್ ಕಿವಿಗೆ ಹಾಕಿಕೊಂಡಿರಲಿಲ್ಲ. ತೀರ್ಪು ಪ್ರಕಟವಾದ ಬಳಿಕ ಅಧ್ಯಕ್ಷ ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಜಾರ್ಜ್ ಬೈಡನ್‍ರ ಕುಟುಂಬಕ್ಕೆ ಫೋನ್ ಮಾಡಿದ್ದರು.

LEAVE A REPLY

Please enter your comment!
Please enter your name here