ಸನ್ಮಾರ್ಗ ವಾರ್ತೆ
ಪಣಜಿ: ಧಾರ್ಮಿಕ ಭಾವನೆಗೆ ದಕ್ಕೆ ತರುತ್ತಿದ್ದಾರೆಂದು ಆರೋಪಿಸಿ ಅಧ್ಯಾಪಕಿಯನ್ನು ಅಮಾನತುಗೊಳಿಸಬೇಕೆಂದು ಕೋರಿದ ಎಬಿವಿಪಿಯ ಕೋರಿಕೆ ತಿರಸ್ಕರಿಸಿದ ಗೋವಾದ ಕಾನೂನು ವಿಶ್ವವಿದ್ಯಾಲಯ. ಧಾರ್ಮಿಕ ಭಾವನೆ ಕೆರಳಿಸುವ ರೀತಿಯಲ್ಲಿ ತರಗತಿ ನಡೆಸುತ್ತಿದ್ದಾರೆಂಬ ಆರೋಪದೊಂದಿಗೆ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆ ಅಧ್ಯಾಪಕಿಯ ವಿರುದ್ಧ ದೂರು ನೀಡಿದ್ದರು. ಆದರೆ, ದೂರಿನಲ್ಲಿ ಮಾನ್ಯತೆಯಿಲ್ಲವೆಂದೂ ಅಧ್ಯಾಪಕಿಯನ್ನು ಅಮಾನತುಗೊಳಿಸುವುದಿಲ್ಲವೆಂದೂ ವ್ಯಕ್ತಪಡಿಸಿ ಕಾಲೇಜು ವ್ಯವಸ್ಥಾಪಕರು ದೂರಿಗೆ ಉತ್ತರಿಸಿದ್ದಾರೆ.
ಪಣಜಿಯ ಸಾಲ್ಗೋಕರ್ ಕಾಲೇಜು ತಮ್ಮ ತೀರ್ಮಾನ ವ್ಯಕ್ತಪಡಿಸಿ ಎಬಿವಿಪಿಗೆ ಉತ್ತರಿಸಿದೆ.
ಪಾಲಿಟೆಕ್ನಿಕ್ ಸಯನ್ಸ್ ಅಧ್ಯಾಪಕಿಯಾದ ಪ್ರೊ.ಶಿಲ್ಪ ಸಿಂಗ್ರ ವಿರುದ್ಧ ಎಬಿವಿಪಿ ದೂರು ನೀಡಿತ್ತು. ಮನುಸ್ಮೃತಿಯ ಕುರಿತು ಕೆಟ್ಟದಾಗಿ ಕಲಿಸುತ್ತಿದ್ದಾರೆಂದು, ರೋಹಿತ್ ವೇಮುಲ, ಎಂ.ಎಂ ಕಲಬುರಗಿ, ನರೇಂದ್ರ ದಾಭೋಲ್ಕರ್ ಮುಂತಾದವರ ಕುರಿತಾಗಿ ತರಗತಿಯಲ್ಲಿ ಚರ್ಚಿಸಲಾಗುತ್ತಿದೆ ಎಂದೂ ಎಬಿವಿಪಿ ದೂರಿನಲ್ಲಿ ತಿಳಿಸಿತ್ತು.
ಮನುಸ್ಮೃತಿಯಲ್ಲಿ ಸ್ತ್ರೀಗಳ ಕುರಿತುಳ್ಳ ದೃಷ್ಟಿಕೋನದ ಬಗ್ಗೆ ಅಧ್ಯಾಪಕಿ ಆನ್ಲೈನ್ ತರಗತಿಯಲ್ಲಿ ಚರ್ಚೆ ನಡೆಸಿದ್ದರು. ತರಗತಿಯಲ್ಲಿ ಫಾರ್ಮ್ ಬಿಲ್ ಕುರಿತು ಮಾತನಾಡುವ ಸಂದರ್ಭದಲ್ಲಿ ಉದಾರೀಕರಣ ಮತ್ತು ಮಾರ್ಕ್ಸಿಸಂ ಇತ್ಯಾದಿಗಳಿಗೆ ಸಂಬಂಧಿಸಿದ ಅಧ್ಯಾಪಕಿಯ ಅಭಿಪ್ರಾಯಗಳನ್ನು ಬಹಿರಂಗವಾಗಿ ಪ್ರಚಾರಪಡಿಸುತ್ತಿದ್ದಾರೆ ಎಂದು ಎಬಿವಿಪಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.
ದೂರಿನಲ್ಲಿ ಯಾವುದೇ ಮಾನ್ಯತೆಯಿಲ್ಲವೆಂದೂ, ದೂರು ನೀಡಿದವರು ಕಾಲೇಜಿನ ವಿದ್ಯಾರ್ಥಿಗಳಲ್ಲವೆಂದೂ ಕಾಲೇಜಿನ ಪ್ರಿನ್ಸಿಪಲ್ ಶಬೀರ್ ಅಲಿ ಹೇಳಿದ್ದಾರೆ. ಇದು ಕಾನೂನು ವಿದ್ಯಾಲಯವಾಗಿದೆ. ನಮಗೆ ಕಾನೂನನ್ನು ಪಾಲಿಸಬೇಕಿದೆ. ಕಾನೂನು ಪ್ರಕಾರ ಅಧ್ಯಾಪಕಿಯನ್ನು ಹೊರಗಟ್ಟಲು ಸಾಧ್ಯವಿಲ್ಲ. ಹಾಗಾಗಿ ಈ ದೂರನ್ನು ತಿರಸ್ಕರಿಸಿದ್ದೇವೆಯೆಂದು ಪ್ರಿನ್ಸಿಪಲ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಾಪಕಿ ಪ್ರೊ.ಶಿಲ್ಪ ಸಿಂಗ್, “ಎಬಿವಿಪಿ ಕಾಲೇಜಿಗೆ ಬೆದರಿಕೆ ನೀಡುತ್ತಿದೆ ಮತ್ತು ಕರ್ತವ್ಯ ನಿಲ್ಲಿಸುವುದು ನನ್ನ ಹಕ್ಕುಗಳ ಮೇಲೆ ಅವರು ಹೇರುವ ಬಲಾತ್ಕಾರವೆಂದೂ” ಅವರು ಹೇಳಿದರು. ಬೀಫ್ನ ಕುರಿತಾಗಿ ತಾನು ಮಾತನಾಡಿದ್ದು ಅವರಿಗೆ ಅಪ್ರಿಯವಾಗಿದೆ ಎಂದೂ ಶಿಲ್ಪ ವ್ಯಕ್ತಪಡಿಸಿದರು.
ಇತ್ತೀಚೆಗೆ ವಿದ್ಯಾಲಯಗಳಲ್ಲಿ ಸಂಘಪರಿವಾರದ ಆಕ್ರಮಣಗಳು ಹೆಚ್ಚುತ್ತಿದ್ದು ಶಾಲಾ-ಕಾಲೇಜುಗಳಲ್ಲಿ ತನ್ನ ಹಿಡಿತ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.












