ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ನ್ಯಾಯಾಧೀಶರನ್ನು ಉಪಲೋಕಾಯುಕ್ತರನ್ನಾಗಿ ನೇಮಿಸಿದ ಉ.ಪ್ರ. ಸರಕಾರ

0
533

ಸನ್ಮಾರ್ಗ ವಾರ್ತೆ

ಲಕ್ನೊ: ಬಾಬರಿ ಮಸೀದಿಯ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕ ಎಲ್‍.ಕೆ. ಅಡ್ವಾಣಿ ಸಹಿತ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ಸಿಬಿಐ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್‍ರನ್ನು ಯೋಗಿ ಆದಿತ್ಯನಾಥ್ ನೇತೃತ್ವದ‌‌ ಉತ್ತರ ಪ್ರದೇಶ ಸರಕಾರವು ಉಪ ಲೋಕಾಯುಕ್ತರನ್ನಾಗಿ ನೇಮಿಸಿದೆ.

ಯಾದವ್‍ರನ್ನು ಮೂರನೇ ಉಪ ಲೋಕಾಯುಕ್ತರಾಗಿ ರಾಜ್ಯಪಾಲರು ಎಪ್ರಿಲ್ 6ಕ್ಕೆ ನೇಮಕಗೊಳಿಸಿದ್ದು, ಲೋಕಾಯುಕ್ತ ಸಂಜಯ್ ಮಿಶ್ರಾರವರ ಮುಂದೆ ಉಪಲೋಕಾ ಯುಕ್ತರಾಗಿ ಅವರು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.

ಸಿಬಿಐ ವಿಶೇಷ ಕೋರ್ಟಿನ ಜಡ್ಜ್ ಆಗಿದ್ದಾಗ ಅವರ ಮುಂದೆ ಬಾಬರಿ ಮಸೀದಿ ಧ್ವಂಸ ಪ್ರಕರಣ ಇತ್ತು. ಲಾಲ್‍ಕೃಷ್ಣ ಅಡ್ವಾಣಿ, , ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಸಹಿತ 32 ಮಂದಿಯನ್ನು ಆರೋಪದಿಂದ ಖುಲಾಸೆಗೊಳಿಸಿದ್ದರು.

ಸಾರ್ವಜನಿಕ ಕಾರ್ಯಕರ್ತರು, ಅಧಿಕಾರಿಗಳ ಭ್ರಷ್ಟಾಚಾರ ಆರೋಪ, ಅಧಿಕಾರ ದುರ್ವಿನಿಯೋಗ ಇತ್ಯಾದಿ ಆರೋಪದಲ್ಲಿ ತನಿಖೆ ನಡೆಸುವ ಸ್ಟಾಟ್ಯೂಟರಿ ಅಥಾರಿಟಿ ಲೋಕಾಯುಕ್ತದಲ್ಲಿ ಲೋಕಾಯುಕ್ತ ಸಹಿತ ಮೂವರು ಉಪ ಲೋಕಾಯುಕ್ತ ಇದ್ದಾರೆ. ಎಂಟು ವರ್ಷ ಇವರ ಕೆಲಸದ ಅವಧಿಯಾಗಿದೆ‌.