ಪ.ಬಂಗಾಳದಲ್ಲಿ ನಾಲ್ಕರ ಬದಲು ಎಂಟು ಮಂದಿಯನ್ನು ಸಿಆರ್ ಪಿಎಫ್ ಕೊಲ್ಲಬೇಕಿತ್ತು: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

0
575

ಸನ್ಮಾರ್ಗ ವಾರ್ತೆ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆಯ ವೇಳೆ ಕೇಂದ್ರ ಮೀಸಲು ಪಡೆಯ ಗುಂಡೇಟಿನಿಂದಾಗಿ ನಾಲ್ವರು ಮತದಾರರು ಮೃತಪಟ್ಟಿರುವ ಘಟನೆಯನ್ನು ಉಲ್ಲೇಖಿಸಿ ಪ.ಬಂಗಾಳದಲ್ಲಿ ಬಿಜೆಪಿ ನಾಯಕ ಪ್ರಚೋದನಾಕಾರಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ.ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಫ್ ಘೋಷ್ ಕೊಲೆಯಾದ ಮತದಾರರನ್ನು ಕೆಟ್ಟ ವ್ಯಕ್ತಿಗಳೆಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಇದೀಗ ಇನ್ನೊಬ್ಬ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಅಲ್ಲಿ ನಾಲ್ವರನ್ನು ಅಲ್ಲ ಎಂಟು ಮಂದಿಯನ್ನು ಸಿಆರ್ ಪಿಎಫ್ ಕೊಲ್ಲಬೇಕಿತ್ತು ಎಂದು ಹೇಳಿದ್ದಾರೆ.

” ಸೀತಲ್ ಕುಚ್ಚಿಯಲ್ಲಿ ನಾಲ್ಕು ಮಂದಿ ಅಲ್ಲ ಲ, ಎಂಟು ಮಂದಿಯನ್ನು ಕೊಲ್ಲಬೇಕಿತ್ತು. ನಾಲ್ಕು ಮಂದಿಯನ್ನು ಮಾತ್ರ ಕೊಂದಿದ್ದಾರೆ. ಹೀಗೆ ಯಾಕೆ ಮಾಡಿದರೆಂದು ಕಾರಣ ಕೇಳೀ ಸಿಆರ್ ಪಿಎಫ್ ಗೆ ನೋಟಿಸು ಜಾರಿ ಮಾಡಬೇಕಾಗಿದೆ. ಗೂಂಡಾಗಳು ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ನಿಷೇಧಿಸುತ್ತಾರೆ. ಕೇಂದ್ರ ಮೀಸಲು ಪಡೆ ಸರಿಯಾಗಿಯೇ ಮಾಡಿದೆ. ಇನ್ನೂ ಹೀಗೆಯೇ ಆದರೆ ಇದುವೇ ಉತ್ತರವಾಗಿರುತ್ತದೆ ಎಂದು ಸಿನ್ಹಾ ಹೇಳಿರುವುದು ಸದ್ಯ ವಿವಾದ ಉಂಟು ಮಾಡಿದೆ.

ಸ್ವ ಕ್ಷೇತ್ರ ಹಬ್ರಾದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಸಿನ್ಹಾ ಹೀಗೆ ಹೇಳಿದ್ದಾರೆ. ಬಿಜೆಪಿ ನಾಯಕನ ಮಾತುಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದಾರೆ. ಇವರು ನಮ್ಮ ದೇಶದ ನಾಯಕರೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯನ್ನು ನಿಷೇಧಿಸಬೇಕೆಂದು ತೃಣಮೂಲ ಕಾಂಗ್ರೆಸ್ ನಾಯಕ ಜ್ಯೋತಿ ಪ್ರಿಯ ಮಲ್ಲಿಕ್ ಆಗ್ರಹಿಸಿದ್ದಾರೆ.

ಶನಿವಾರ ನಾಲ್ಕನೇ ಹಂತದ ಚುನಾವಣೆ ನಡೆದ ಕೂಚ್ ಬಿಹಾರಿನ ಸೀತಲ್‍ ಕೂಚ್ಚಿಯಲ್ಲಿ ಮತದಾನದ ವೇಳೆ ಸಿಆರ್ ಪಿ ಎಫ್ ಗುಂಡು ನವರೊಂದಿಗೆ ಸ್ಥಳೀಯರು ಮಾತಿನ ಚಕಮಕಿ‌ ನಡೆಸಿದಾಗ ಸಿಆರ್ ಪಿ ಎಫ್ ನ ಸಿಬ್ಬಂದಿಗಳು ಗುಂಡು ಹಾರಿಸಿದ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದ್ದರು. ಘಟನೆ ರಾಷ್ಟ್ರಮಟ್ಟದಲ್ಲಿ ಟೀಕೆಗೊಳಗಾಗಿದೆ.