ಮಹಾ ವಿಕಾಸ್ ಅಘಾಡಿಯಿಂದ ಹೊರಬರುವ ಬಗ್ಗೆ ಚರ್ಚಿಸೋಣ; 24 ಗಂಟೆಯೊಳಗೆ ವಾಪಾಸು ಬನ್ನಿ: ಶಿಂಧೆ ತಂಡಕ್ಕೆ ಸಂಜಯ್ ರಾವತ್ ಆಹ್ವಾನ

0
150

ಸನ್ಮಾರ್ಗ ವಾರ್ತೆ

ಮುಂಬಯಿ: ಮಹಾರಾಷ್ಟ್ರ ಸಚಿವ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಂಡಾಯವೆದ್ದ ಬಳಿಕ ರಾಜಕೀಯ ಅತಂತ್ರ ಪರಿಸ್ಥಿತಿಯಲ್ಲಿ ಶಿವಸೇನೆ ಸಿಲುಕಿದೆ. ಗುವಾಹಟಿಯಲ್ಲಿರುವ ಭಿನ್ನಮತೀಯರನ್ನು ಮುಂಬೈಗೆ ಮರಳುವಂತೆ ಮತ್ತು ಮಹಾ ವಿಕಾಸ್ ಅಘಾಡಿಯಿಂದ ಹೊರಬರುವ ಕುರಿತು ಚರ್ಚಿಸೋಣ ಎಂದು ಅವರು ಹೇಳಿದ್ದಾರೆ.

ನೀವು 24 ಗಂಟೆಯೊಳಗೆ ಮರಳಿ ಬನ್ನಿ ಸಖ್ಯದಿಂದ ಹೊರ ಬರುವ ಕುರಿತು ಚರ್ಚಿಸೋಣ ಎಂದು ಅವರು ಹೇಳಿದರು.

ಶಿಂಧೆಯ ತಂಡದವರಿಗೆ ಮುಂಬೈಗೆ ಬರುವ ಧೈರ್ಯ ಇಲ್ಲ. ಇಲ್ಲಿ ಬಂದು ಅವರಿಗೆ ಏನು ಹೇಳಬೇಕೊ ಅದನ್ನು ಹೇಳಲಿ. ಇಲ್ಲಿ ಬಂದು ಪತ್ರ ವ್ಯವಹಾರ ನಡೆಸಬೇಕು. ಆದರೆ, ಎಲ್ಲರೂ ಗುವಾಹಟಿಯಲ್ಲಿ ಕೂತ ಮಾತಾಡುತ್ತಿದ್ದಾರೆ. ಧೈರ್ಯವಿದ್ದರೆ ಮುಂಬಯಿಗೆ ಬರಲಿ, ಉದ್ಧವ್‍ರ ಮುಂದೆ ತನ್ನ ಮಾತು ಹೇಳಲಿ. ನಿಮ್ಮೆಲ್ಲರ ಮಾತನ್ನು ಆಲಿಸಲಾಗುವುದು ಎಂಬ ಸಂಪೂರ್ಣ ಭರವಸೆ ನನಗಿದೆ. 24 ಗಂಟೆಯೊಳಗೆ ಮರಳಿ ಬನ್ನಿ. ಮಹಾರಾಷ್ಟ್ರ ವಿಕಾಸ್ ಅಘಾಡಿಯಿಂದ ಹೊರಬರುವ ಕುರಿತು ವಿಚಾರ ವಿಮರ್ಶೆ ಮಾಡೋಣ ಎಂದು ಸಂಜಯ್ ರಾವತ್ ಹೇಳಿದ್ದಾರೆ.