ಭಾರತದ ಅರ್ಧಕ್ಕೂ ಹೆಚ್ಚು ಸಂಪತ್ತು ಶೇ.10 ಶ್ರೀಮಂತರಲ್ಲಿ

0
379

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತದ ಶ್ರೀಮಂತರಾದ ಶೇ.10ರಷ್ಟು ಜನರು ಭಾರತದ ಶೇ.50ರಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ನ್ಯಾಶನಲ್ ಸ್ಯಾಂಪಲ್‍ನ ಆಲ್ ಇಂಡಿಯಾ ಡೆಬಿಟನ್ ಆಂಡ್ ಇನ್ವೆಸ್ಟ್‍ಮೆಂಟ್ ಸಮೀಕ್ಷೆಯಲ್ಲಿ ಈ ವಿವರ ಬಹಿರಂಗವಾಗಿದೆ.

ಕಟ್ಟಡಗಳು, ಬ್ಯಾಂಕ್ ಠೇವಣಿ, ಜಮೀನು, ವಾಹನ ಸಹಿತ ಎಲ್ಲವನ್ನು ಪರಿಗಣಿಸಿ ಸರ್ವೇ ನಡೆಸಲಾಗಿತ್ತು. 2019ರ ಜನವರಿಯಿಂದ ಡಿಸೆಂಬರ್‌ವರೆಗಿನ ಸಮೀಕ್ಷೆ ಇದು. ಗ್ರಾಮಗಳಲ್ಲಿ ಸ್ಥಿರಾಸ್ತಿಗಳ ಬೆಲೆ 274.6 ಕೋಟಿ ರೂಪಾಯಿ ಆಗಿದೆ. ಅದರಲ್ಲಿ 132.5 ಲಕ್ಷ ರೂಪಾಯಿ ಶೇ.10ರಷ್ಟು ಶ್ರೀಮಂತರ ಕೈಯಲ್ಲಿದೆ ಎಂದು ಸಮೀಕ್ಷೆ ಹೇಳಿದೆ.

ದಿಲ್ಲಿಯಲ್ಲಿ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ತೀವ್ರವಾಗಿ ಹೆಚ್ಚಾಗಿದೆ. ದಿಲ್ಲಿಯಲ್ಲಿ ಶೇ.10ರಷ್ಟು ಶ್ರೀಮಂತರ 80.8% ಸೊತ್ತನ್ನು ಹೊಂದಿದ್ದಾರೆ. ದಿಲ್ಲಿಯ ಶೇ.50ರಷ್ಟು ಜನರಲ್ಲಿ 2.1% ಆಸ್ತಿ ಮಾತ್ರವಿದೆ.

ದಿಲ್ಲಿಯ ನಂತರ ಹೆಚ್ಚು ಅಂತರ ಪಂಜಾಬಿನಲ್ಲಿದೆ. ಶೇ.10ರಷ್ಟು ಶ್ರೀಮಂತರು ಶೇ.65%ರಷ್ಟು ಸಂಪತ್ತು ನಿರ್ವಹಿಸುತ್ತಿದ್ದಾರೆ. ಕೆಳಮಟ್ಟದ ಆರ್ಥಿಕತೆ ಇರುವ ಶೇ.50ರಷ್ಟು ಜನರು ಶೇ.5ರಷ್ಟು ಸಂಪತ್ತು ಹೊಂದಿದ್ದಾರೆ. ದೊಡ್ಡ ರಾಜ್ಯಗಳಲ್ಲಿ ಈ ಅಂತರ ಅತ್ಯಂತ ಕಡಿಮೆ ಇರುವುದು ಕಾಶ್ಮೀರದಲ್ಲಿ ಇಲ್ಲಿ ಶೇ.10ರಷ್ಟು ಶ್ರೀಮಂತರಲ್ಲಿ ಶೇ. 32ರಷ್ಟು ಆಸ್ತಿ ಇದೆ. ಕೆಳ ಆರ್ಥಿಕತೆಯ ಶೇ.50ರಷ್ಟು ಮಂದಿಯು ಶೇ.18ರಷ್ಟು ಸಂಪತ್ತು ಹೊಂದಿದ್ದಾರೆ.