ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಎದುರಾಳಿಯೊಂದಿಗೆ ಸ್ಪರ್ಧಿಸಲು ನಿರಾಕರಿಸಿದ ಅಲ್ಜೀರಿಯಾದ ಜುಡೊ ತಾರೆಗೆ 10 ವರ್ಷ ನಿಷೇಧ!

0
456

ಸನ್ಮಾರ್ಗ ವಾರ್ತೆ

ಟೊಕಿಯೊ: ಇಸ್ರೇಲಿನೊಂದಿಗೆ ಸ್ಪರ್ಧಿಸುವುದಿಲ್ಲ ಎಂದು ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಅಲ್ಜೀರಿಯದ ಜುಡೊ ತಾರೆ ಫತ್‍ಹ್ ನೌರ್‌ಗೆ ಹತ್ತು ವರ್ಷ ನಿಷೇಧ ಮತ್ತು ತರಬೇತುದಾರನಿಗೂ ಅಂತಾರಾಷ್ಟ್ರೀಯ ಜುಡೊ ಫೆಡರೇಷನ್ ನಿಷೇಧ ಹೇರಿದೆ.

ರಾಜಕೀಯ, ಧಾರ್ಮಿಕ ಪ್ರಚಾರ ಮತ್ತು ಪ್ರತಿಭಟನೆಗಾಗಿ ಒಂದು ವೇದಿಕೆಯಾಗಿ ಇಬ್ಬರು ಒಲಿಂಪಿಕ್ಸನ್ನು ಉಪಯೋಗಿಸಿದರೆಂದು ಐಜೆಎಫ್ ತಿಳಿಸಿದೆ. ಒಲಿಂಪಿಕ್ಸ್ ನಿಯಮಗಳ ಉಲ್ಲಂಘನೆ ಎಂದು ಫೆಡರೇಷನ್ ಗವರ್ನಿಂಗ್ ಬಾಡಿ ಹೇಳಿತು.

ಪುರಷರ 73 ಕೆಜಿ ವಿಭಾಗದಲ್ಲಿ ಅವರು ಸ್ಪರ್ಧಿಸಬೇಕಾಗಿತ್ತು. ಅವರಿಗೆ ಮೊದಲ ಎದುರಾಳಿ ಸುಡಾನಿನ ಮುಹಮ್ಮದ್ ಅಬ್ದುಲ್ ರಸೂಲ್ ಆಗಿದ್ದರು. ಇಲ್ಲಿ ಗೆದ್ದರೆ ಎರಡನೆ ಸುತ್ತಿನಲ್ಲಿ ಅವರು ಇಸ್ರೇಲಿನ ತೊಹರ ಬುತ್‍ಬುಲ್‍ರನ್ನು ಎದುರಿಸಬೇಕಿತ್ತು. ಇದನ್ನು ದೂರ ಇಡಲು ಫತ್‍ಹಿ ನೌರಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

2031 ಜುಲೈ 23ರವರೆಗೆ ಐಜೆಎಫ್ ಆಯೋಜಿಸುವ ಸ್ಪರ್ಧೆ ಕಾರ್ಯಕ್ರಮದಿಂದ ಇಬ್ಬರಿಗೂ ನಿಷೇಧವಿದೆ. ಫೆಲಸ್ತೀನಿ ಹೋರಾಟವನ್ನು ಬೆಂಬಲಿಸುವ ನಾನು ಇಸ್ರೇಲಿನೊಂದಿಗೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಅಲ್ಜೀರಿಯ ಟಿವಿಯ ಸಂದರ್ಶನದಲ್ಲಿ ಹೇಳಿದ ಅವರು ಬಹಳ ಕಷ್ಟಪಟ್ಟು ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದರು. ಆದರೆ ಫೆಲಸ್ತೀನ್ ಹೋರಾಟ ಎಲ್ಲದ್ದಕ್ಕಿಂತಲೂ ಮಿಗಿಲಿನದ್ದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

LEAVE A REPLY

Please enter your comment!
Please enter your name here