ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗ ಬಯಸುವವರು 11,000ರೂ. ಪಾರ್ಟಿ ಫಂಡ್ ನೀಡಬೇಕು

0
431

ಸನ್ಮಾರ್ಗ ವಾರ್ತೆ

ಲಕ್ನೊ: ಮುಂದಿನ ವರ್ಷ ಆರಂಭದಲ್ಲಿ ಉತ್ತರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್‍ನಿಂದ ಟಿಕೆಟ್ ಪಡೆಯಲು ಬಯಸುವವರು 11,000 ರೂಪಾಯಿ ಕಾಂಗ್ರೆಸ್ ಫಂಡ್‍ಗೆ ನೀಡಬೇಕಾಗಿದೆ. ಅಭ್ಯರ್ಥಿತ್ವವನ್ನು ಗಂಭೀರವಾಗಿ ಪರಿಗಣಿಸದಿರುವವರನ್ನು ದೂರವಿಡುವ ತಂತ್ತವಿದು.

ಸೆಪ್ಟಂಬರ್ 25ರೊಳಗೆ ಅರ್ಜಿ ಮತ್ತು ಹಣ ನೀಡಬೇಕೆಂದು ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ವಾರ ಪ್ರಿಯಾಂಕಾ ಗಾಂಧಿಯ ನೇತೃತ್ವದಲ್ಲಿ ದ್ವಿದಿನ ಶಿಬಿರ ನಡೆದಿತ್ತು. ನಂತರ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಹ್ವಾನಿಸಿದೆ.

ಈ ಸಲ ಮೈತ್ರಿ ರಹಿತವಾಗಿ ಪ್ರಿಯಾಂಕಾ ಗಾಂಧಿಯವರನ್ನು ಮುಂದಿಟ್ಟು ಚುನಾವಣೆ ಎದುರಿಸಲು ಕಾಂಗ್ರೆಸ್ ಶ್ರಮಿಸುತ್ತಿದೆ. ಪ್ರಿಯಾಂಕಾರ ನೇತೃತ್ವದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದ ಕೆಲಸ ಪ್ರಯೋಜನವಾಗಬಹುದೆನ್ನುವ ನಿರೀಕ್ಷೆಯನ್ನು ಕಾಂಗ್ರೆಸ್ ಇರಿಸಿಕೊಂಡಿದೆ. ಸಮಾಜವಾದಿ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಕೇವಲ ಏಳು ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು.