ಆಮಿನಾದರ ಸಾಕುಕೋಳಿ, ಗಿರಿಜಕ್ಕನ ಬೆಕ್ಕು

0
573

ಸನ್ಮಾರ್ಗ ವಾರ್ತೆ

ಸಫ್ವಾನ್ ಸವಣೂರು

ಹಿಂದೊಂದು ಕಾಲದಲ್ಲಿ
ಮನೆಯಂಗಳಕ್ಕೆ ಬೇಲಿ ಇರಲಿಲ್ಲ,
ಈಗ ಬಾನೆತ್ತರದ ಗೋಡೆಗಳಿವೆ…!
ಮನದಂಗಣದಲ್ಲಿ ಕೂಡಾ
ಜಾತಿ ಧರ್ಮಗಳ ಗಾರೆ ಕಲಸಿದ
ತಡೆಗೋಡೆಗಳು ನಿರ್ಮಾಣವಾಗಿವೆ…!!

ಓರಗೆಯ ಹುಡುಗರ ಆಟಗಳಿಗೆ
ಅವರಿವರ ಅಂಗಳದ ಮಿತಿಯಿರಲಿಲ್ಲ,
ಈಗ ಆಟವಾಡುವಾಗ ಚೆಂಡು
ನೆರೆಮನೆಯಂಗಣ ದಾಟುವಂತಿಲ್ಲ…!
ಆಮಿನಾದನ ಸಾಕುಕೋಳಿಗಳು
ಕುಸುಮಕ್ಕನ ಅಂಗಳದಲ್ಲಿ ಕುಕ್ಕುವಂತಿಲ್ಲ,
ಗಿರಿಜಕ್ಕನ ಬೆಕ್ಕಿಗೆ ಪಕ್ಕದ ಫಾತಿಮಾಳ
ಮನೆಯ ಅಟ್ಟಳಿಗೆಗೆ ಪ್ರವೇಶವಿಲ್ಲ…!!

ಈಸುಬಾಕ ನೆಟ್ಟ ಮರದ ಕೊಂಬೆ
ರಮೇಶನ ಅಂಗಳದ ಕಡೆಗೆ ವಾಲಿತ್ತು,
ವಾದ ವಿವಾದಗಳು ತಾರಕಕ್ಕೇರಿ
ಮೊನ್ನೆ ಮರವೇ ಮಾಯವಾಗಿದೆ…!
ಜೋಸೆಫನಿಗೆ ಸೇರಿದ ತೆಂಗಿನಿಂದ
ಒಣಗಿದ ಮಡಲು ಕೆಳಗೆ ಬಿದ್ದಿತ್ತು,
ಹಿಂದಿನ ಮನೆಯವರ ಅಂಗಳವೇ
ಡೊಂಕಾದಂತೆ ಜಗಳವಾಡಿದ್ದರು…!!

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.