“ಭಿನ್ನಮತೀಯರು ಜೀವಂತ ಶವ”: ಹೇಳಿಕೆ ಸಮರ್ಥಿಸಿಕೊಂಡ ಸಂಜಯ್ ರಾವತ್

0
198

ಸನ್ಮಾರ್ಗ ವಾರ್ತೆ

ಮುಂಬೈ: ಶಿವಸೇನೆಯ ಬಂಡುಕೋರ ನಾಯಕರನ್ನು ಜೀವಂತ ಶವಗಳೆಂದುದನ್ನು ಸಂಜಯ್ ರಾವತ್ ಸಮರ್ಥಿಸಿಕೊಂಡಿದ್ದಾರೆ. ಇದು ಮಹಾರಾಷ್ಟ್ರದ ಮಾತಿನ ರೀತಿ. ಯಾರ ಭಾವನೆಯನ್ನೂ ನೋಯಿಸಲು ತಾನು ಬಯಸಿಲ್ಲ ಎಂದು ಅವರು ಹೇಳಿದರು. ಅವರ ದೇಹ ಜೀವವಾಗಿದ್ದರೆ ಆತ್ಮ ಮೃತಪಟ್ಟಿರುತ್ತದೆ. ಈ ಹೇಳಿಕೆಯಲ್ಲಿ ಏನು ತಪ್ಪಿದೆ ಎಂದು ರಾವತ್ ಪ್ರಶ್ನಿಸಿದರು. ಇದು ಮಹಾರಾಷ್ಟ್ರದ ಒಂದು ಮಾತಿನ ಶೈಲಿ. 40 ವರ್ಷ ಪಾರ್ಟಿಯಲ್ಲಿ ಜೊತೆಗೂಡಿ ನಿಂತವರು ಈಗ ಅಡಗಿಕೂತಿದ್ದಾರೆ. ಆದುದರಿಂದ ಅವರ ಆತ್ಮ ಮೃತಪಟ್ಟಿದೆ ಎಂದೆ. ಯಾರದೇ ಭಾವನೆಯನ್ನು ನೋಯಿಸಲು ಬಯಸಿಲ್ಲ ಸತ್ಯವನ್ನು ಮಾತ್ರ ಹೇಳಿದ್ದೇನೆ ಎಂದು ಅವರು ಹೇಳಿದರು.

ಏಕನಾಥ ಶಿಂಧೆ ನಮ್ಮ ಅತ್ಯಂತ ಆತ್ಮೀಯ ವ್ಯಕ್ತಿಯಾಗಿದ್ದರು. ನಾವು ಸಂತೋಷ- ನೋವುಗಳನ್ನು ಹಂಚಿಕೊಳ್ಳುತ್ತಿದ್ದೆವು. ಈ ವಿಷಯ ಈಗ ಬೀದಿ ಹೋರಾಟದ ಜೊತೆಗೆ ಒಂದು ಕಾನೂನು ಹೋರಾಟವಾಗಿದೆ. ನೀವು ಯಾಕೆ ಅಸ್ಸಾಮಿಗೆ ಹೋಗಿದ್ದೀರಿ? ಅಲ್ಲಿ ನೆರೆಯಲ್ಲಿ ನೂರಾರು ಮಂದಿ ಮೃತಪಡುತ್ತಿದ್ದಾರೆ. ಆದುದರಿಂದ ನೀವು ಮಹಾರಾಷ್ಟ್ರಕ್ಕೆ ಮರಳಿ ಬನ್ನಿ, ನಿಮಗೆ ಮತಕೊಟ್ಟು ಗೆಲ್ಲಿಸಿದ್ದು ಇಡಿ, ಸಿಬಿಐ ಅಲ್ಲ, ಸಾಮಾನ್ಯ ಜನರು ಎಂದು ರಾವತ್ ನೆನಪಿಸಿದರು.

“ಭಿನ್ನಮತೀಯ ಶಾಸಕರು ಯಾವಾಗ ಬೇಕಾದರೂ ಮಹಾರಾಷ್ಟ್ರ ವಿಧಾನಸಭೆಯ ವಿಶ್ವಾಸ ಮತ ಯಾಚನೆ ಎದುರಿಸಲು ಸಿದ್ಧ ಮೊದಲು ಒಪ್ಪೇಕಾದ್ದು ಸಿಂಧೆ” ಎಂದು ಭಿನ್ನಮತೀಯರ ಕ್ಯಾಂಪಿನಲ್ಲಿರುವ ಮಾಜಿ ಸಚಿವ, ಶಿವಸೇನೆ ಶಾಸಕ ದೀಪಕ್ ಸೋರ್‍ಕರ್ ಹೇಳಿದರು. ಇಂದು ಮುಂದಿನ ಕಾರ್ಯಕ್ರಮಗಳಿಗಾಗಿ ಶಿಂಧೆ ಸಭೆ ಕರೆದಿದ್ದಾಗಿ ವರದಿಯಾಗಿದೆ.