ಹಜ್ ಯಾತ್ರಿಕರು ಮಿನಾದಲ್ಲಿ: ನಾಳೆ ಅರಫಾ ದಿನ; 20 ಲಕ್ಷಕ್ಕೂ ಅಧಿಕ ಹಾಜಿಗಳಿಂದ ತುಂಬಿರುವ ಮಕ್ಕಾ

0
1300

ಮಕ್ಕ, ಆ. 9: ಜಗತ್ತಿನ 20 ಲಕ್ಷಕ್ಕೂ ಅಧಿಕ ಹಾಜಿಗಳು ಮಿನದ ಶಿಬಿರಗಳಲ್ಲಿದ್ದಾರೆ. ಶನಿವಾರ ಅರಫಾ ಸಂಗಮ ನಡೆಯಲಿದೆ. ಶಿಬಿರಗಳಿಂದ ಪ್ರಾರ್ಥನೆಗಳ ದನಿ ಕೇಳಿಸತೊಡಗಿದೆ. ಇವರೆಲ್ಲರೂ ಅಲ್ಲಾಹನ ಅತಿಥಿಯಾಗಿ ಇಲ್ಲಿಗೆ ತಲುಪಲು ಸಾಧ್ಯವಾದ ಸಂತಸದಲ್ಲಿದ್ದಾರೆ.

ಗುರುವಾರ ರಾತ್ರೆ ಹಾಜಿಗಳು ಮಿನಾಕ್ಕೆ ಬರತೊಡಗಿದರು. ಶುಕ್ರವಾರ ಸಂಜೆಯ ಹೊತ್ತಿಗೆ ಎಲ್ಲರೂ ತಮ್ಮ ತಮ್ಮ ಟೆಂಪ್ ಸೇರಿಕೊಂಡರು. ಶನಿವಾರ ಅರಫಾದಲ್ಲಿ ಒಂದು ಹಗಲು ಪ್ರಾರ್ಥನೆ ನಡೆಸುವರು.

ಅಲ್ಲಿಗೆ ಹಜ್‍ನ ಪ್ರಧಾನ ವಿಧಿ ಪೂರ್ಣವಾಗಲಿದೆ. ಭಾರತದಿಂದ ಎರಡು ಲಕ್ಷ ಮಂದಿ ಇದ್ದಾರೆ. ಉತ್ತಮ ಸೇವೆ ನೀಡುವ ಭರವಸೆಯನ್ನು ಸೌದಿ ಅರೇಬಿಯ ಸರಕಾರ ನೀಡಿದೆ. ಮೂರು ಲಕ್ಷ ಮಂದಿಯನ್ನು ಹಜ್ ಸೇವಕರಾಗಿ ನಿಯುಕ್ತಿಗೊಳಿಸಲಾಗಿದೆ.