ಸೌದಿಯಲ್ಲಿ ಸಿಲುಕಿದ್ದೀರಾ? ಎಕ್ಸಿಟ್ ವೀಸಾದ ಮೂಲಕ ತಾಯ್ನಾಡಿಗೆ ಮರಳಲು ಎರಡು ದಿನಗಳ ಅವಕಾಶ

0
457

ಸನ್ಮಾರ್ಗ ವಾರ್ತೆ

ರಿಯಾದ್: ವಿವಿಧ ಕಾರಣಗಳಿಂದಾಗಿ ಭಾರತಕ್ಕೆ ಮರಳದೆ, ಮರಳಲು ಸಾಧ್ಯವಾಗದೇ ಸಂಕಟ ಪಡುತ್ತಿರುವವರಿಗೆ ಸೌದಿಯ ಭಾರತೀಯ ರಾಯಭಾರ ಕಚೇರಿ ಅವಕಾಶವೊಂದನ್ನು ಒದಗಿಸಿದೆ.

ಇಂಥವರು ಮುಂದಿನ ಎರಡು ದಿನಗಳಲ್ಲಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ತಾಯ್ನಾಡಿಗೆ ಮರಳುವ ಅವಕಾಶವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇಕಾಮಾ ಅಥವಾ ನಿವಾಸ ದಾಖಲೆ ನವೀಕರಣ ಮಾಡದವರು, ಹುರೂಬ್ ಅಥವಾ ಓಡಿ ಹೋದ ಪ್ರಕರಣದಲ್ಲಿ ಸಿಲುಕಿಕೊಂಡವರು ಇತ್ಯಾದಿ ಬೇರೆ ಬೇರೆ ಕಾರಣಗಳಿಗಾಗಿ ತಾಯ್ನಾಡಿಗೆ ಮರಳಲು ಸಾಧ್ಯವಾಗದವರಿಗೆ ಫೈನಲ್ ಎಕ್ಸಿಟ್‌ನ ಮೂಲಕ ಭಾರತಕ್ಕೆ ಮರಳಲು ಅವಕಾಶ ಇದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ‌.

ಇದಕ್ಕಾಗಿ http://cgijeddah.org/consulate/exitVisa/reg.aspx
ಎಂಬ ವೆಬ್ ಸೈಟಿನ ಫೈನಲ್ ಎಕ್ಸಿಟ್ ವೀಸಾ ರಿಜಿಸ್ಟ್ರೇಷನ್ ಫಾರ್ಮ್ ಎಂಬ ಟಾಗ್‌ನಲ್ಲಿ ತಮ್ಮ ವಿವರವನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇದೇ ವೇಳೆ ಕೊರೋನಾ ಲಾಕ್ ಡೌನ್ ಘೋಷಿಸುವುದಕ್ಕಿಂತ ಮೊದಲು ಈ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿದವರು ಮತ್ತೊಮ್ಮೆ ನೋಂದಾಯಿಸಬೇಕಿಲ್ಲ.

ಹೀಗೆ ವೆಬ್‌ಸೈಟ್‌ನಲ್ಲಿ ಹೆಸರು ದಾಖಲಿಸಲು ಸಾಧ್ಯವಾಗದವರು ರಾಯಭಾರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ +966556122301 ಸಂಖ್ಯೆಯನ್ನು ವಾಟ್ಸಪ್ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.