ಸನ್ಮಾರ್ಗ ವಾರ್ತೆ
ಜಿದ್ದ,ಸೆ.18: ಅರಮ್ಕೊ ತೈಲಗಾರಕ್ಕೆ ದಾಳಿ ನಡೆದ ಬಳಿಕ ಸ್ವಲ್ಪಮಟ್ಟದಲ್ಲಿ ಆಗಿದ್ದ ಅಡಚಣೆಯು ನಿವಾರಣೆಯಾಗಿದ್ದು ಸೌದಿ ಅರೇಬಿಯ ತೈಲ ವಿತರಣೆಯನ್ನು ಪೂರ್ವ ಸ್ಥಿತಿಗೆ ತಂದಿದೆ ಎಂದು ಸೌದಿ ಅರೇಬಿಯದ ಇಂಧನ ಸಚಿವ ಅಮೀರ್ ಅಬ್ದುಲ್ ಅಝೀಝ್ ಬಿನ್ ಸಲ್ಮಾನ್ ಹೇಳಿದರು. ಶನಿವಾರಕ್ಕಿಂತಲೂ ಮೊದಲಿನ ಸ್ಥಿತಿಗೆ ತೈಲ ವಿತರಣೆ ತಲುಪಿದೆ ಎಂದ ಅವರು ಮಂಗಳವಾರ ತಡರಾತ್ರೆ ಜಿದ್ದದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಈ ತಿಂಗಳು ಬಳಕೆದಾರ ದೇಶಗಳ ತೈಲ ವಿತರಣೆ ಸಾಮಾನ್ಯ ಸ್ಥಿತಿಯಲ್ಲೆ ಮುಂದುವರಿಯಲಿದೆ. ಸೆಪ್ಟಂಬರ್ ಕೊನೆಯಲ್ಲಿ ತೈಲೋತ್ಪಾದನೆಯ ಸಾಮಥ್ರ್ಯ ಪ್ರತಿ ದಿವಸ ಹನ್ನೊಂದು ದಶಲಕ್ಷ ಬ್ಯಾರಲ್ಗೆ ಹೆಚ್ಚಳವಾಗಲಿದೆ ಎಂದು ಅಮೀರ್ ಅಬ್ದುಲ್ ಅಝೀಝ್ ಹೇಳಿದರು. ದಾಳಿಯು ಎಲ್ಲಿಂದ ಆಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಅದನ್ನು ಗೃಹಸಚಿವಾಲಯ ತಿಳಿಸಲಿದೆ ಎಂದು ಅವರು ಹೇಳಿದ್ದಾರೆ. ದಾಳಿಯ ಹಿಂದೆ ಯಾರಿದ್ದಾರೆ ಎಂದು ಕಂಡು ಹುಡುಕಲು ವಿಶ್ವಸಂಸ್ಥೆ ತನಿಖೆ ತಂಡವನ್ನು ಕಳುಹಿಸಲಿದೆ ಎಂದು ಅವರು ಹೇಳಿದರು.












