ಸನ್ಮಾರ್ಗ ವಾರ್ತೆ
ಬೀಜಿಂಗ್,ಸೆ.18: ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನದ ಅಧ್ಯಕ್ಷ ಶಿ ಜಿನ್ಪಿಂಗ್ ಭಾಗವಹಿಸುವ ಎರಡನೆಯ ಅನಧೀಕೃತ ಶೃಂಗದಲ್ಲಿ ಕಾಶ್ಮೀರ ವಿಷಯ ಮುಖ್ಯ ಚರ್ಚಾ ವಿಷಯವಾಗುವುದಿಲ್ಲ ಎಂದು ಚೀನದ ವಿದೇಶ ವಕ್ತಾರ ಹು ಚುನಿಂಗ್ ತಿಳಿಸಿದ್ದಾರೆ.
ಅನಧಿಕೃತ ಶೃಂಗವಾದ್ದರಿಂದ ಕಾಶ್ಮೀರ ಚರ್ಚೆಯ ಅಜೆಂಡಾದಲ್ಲಿದೆಯೇ ಎಂಬ ಖಚಿತತೆ ಇಲ್ಲ. ಯಾವ ವಿಷಯ ಚರ್ಚೆಗೆ ಬರಲಿ ಎಂದು ಎರಡು ದೇಶಗಳ ನಾಯಕರು ತೀರ್ಮಾನಿಸಲು ಸಮಯ ನೀಡುವ ಕೆಲಸವನ್ನು ನಾವು ಮಾಡಬೇಕಾಗಿದೆ. ಅಕ್ಟೋಬರ್ನಲ್ಲಿ ಶಿ ಜಿನ್ಪಿಂಗ್ ಭಾರತ ಸಂದರ್ಶಿಸಿದಾಗ ಪರಸ್ಪರ ಅನಧಿಕೃತ ಶೃಂಗ ನಡೆಸಿದ್ದರು. ಚೀನದ ಪ್ರಧಾನಿ, ಸಖ್ಯರಾಷ್ಟ್ರ ಪಾಕಿಸ್ತಾನ, ಜಮ್ಮು-ಕಾಶ್ಮೀರದ ವಿಷಯದಲ್ಲಿ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಪ್ರತಿಭಟಿಸಿವೆ. ಈ ಪರಿಸ್ಥಿತಿಯಲ್ಲಿ ಚೀನದ ಅಧ್ಯಕ್ಷರು ಭಾರತಕ್ಕೆ ಬರುತ್ತಿರುವುದು ಗಮನಾರ್ಹವಾಗಿದೆ.












