ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್, ಮಾ. 25: ರಷ್ಯದ ಕುರಿಲ್ ದ್ವೀಪದಲ್ಲಿ ಭೂಕಂಪನ ಆಗಿದ್ದು ಸುನಾಮೀ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯು ದಾಖಲಾಗಿದ್ದು ಅಮೆರಿಕದ ಹವಾಮಾನ ನಿರೀಕ್ಷಣಾ ಕೇಂದ್ರ ಸುನಾಮಿ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆಯನ್ನು ನೀಡಿದೆ. ಹವಾಯ್ ರಾಜ್ಯ ಸುನಾಮಿ ಕುರಿತು ಮುನ್ನೆಚ್ಚರಿಕೆಯನ್ನು ಪಾಲಿಸಬೇಕೆಂದು ಅಮೆರಿಕ ಓಷ್ಯನಿಕ್ ಆಂಡ್ ಅಟೊಮಾಸ್‍ಫೆರಿಕ್ ಅಡ್ಮಿನಿಸ್ಟ್ರೇಶನ್ ತಿಳಿಸಿದೆ. ಸುನಾಮಿ ತೆರೆಗಳು 0.3 ಮೀಟರ್ ಗಿಂತ ಕಡಿಮೆಯಿರಲಿದೆ. ಭೂಕಂಪದಿಂದಾಗಿ ಸುನಾಮಿ ಸಾಧ್ಯತೆಯಿದೆ ಎಂದು ಫೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ತಿಳಿಸಿದೆ.
ಸೆವೆರೊ ನಗರದಿಂದ ದಕ್ಷಿಣ- ನೈರುತ್ಯದಲ್ಲಿ 56.7 ಕಿಲೊಮೀಟರ್ ವೇಗದಿಂದ ಗಾಳಿ ಬೀಸಲಿದೆ ಎಂದು ಅಮೆರಿಕ ಜಿಯೊಲಾಜಿ ಸರ್ವೆ
(ಯುಎಸ್‍ಜಿಎಸ್ ) ತಿಳಿಸಿದೆ. ನಾಶ ನಷ್ಟಗಳ ಕುರಿತು ವರದಿಯಾಗಿಲ್ಲ.












