ಕೊರೋನ: ಸುಪ್ರೀಂಕೋರ್ಟಿನಿಂದ ಸ್ವಯಂಪ್ರೇರಿತ ಕೇಸು ದಾಖಲು; ಕೇಂದ್ರ ಸರಕಾರಕ್ಕೆ ನೋಟಿಸ್

0
512

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೊನ ಪ್ರತಿರೋಧಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸ್ವಪ್ರೇರಿತ ಕೇಸನ್ನು ಸುಪ್ರೀಂಕೋರ್ಟು ದಾಖಲಿಸಿದೆ. ವಿವಿಧ ಹೈಕೋರ್ಟುಗಳಲ್ಲಿ ಇದಕ್ಕೆ ಸಂಬಂಧಿಸಿ ಇರುವ ಕೇಸುಗಳನ್ನು ಪರಿಗಣಿಸಿ ಸುಪ್ರೀಂ ಕೋರ್ಟು ಕ್ರಮ ಜರಗಿಸಿದೆ. ಆಕ್ಸಿಜನ್ ವಿತರಣೆಯಲ್ಲಿ ಲೋಪಗಳು, ತುರ್ತು ಅಗತ್ಯವಿರುವ ಮದ್ದಿನ ಕೊರತೆ ಇದಕ್ಕೆ ಸಂಬಂಧಿಸಿದ ಕೇಸುಗಳು ಹೈಕೋರ್ಟಿನಲ್ಲಿ ನೆಲೆಸಿವೆ.

ಕೊರೊನ ಪ್ರತಿರೋಧಕ್ಕಾಗಿ ಕೇಂದ್ರ ಸರಕಾರ ತಯಾರಿಸಿದ ಯೋಜನೆಯನ್ನು ಸಮರ್ಪಿಸಲು ಕೋರ್ಟ್ ಸೂಚಿಸಿದೆ. ವ್ಯಾಕ್ಸಿನ್ ವಿತರಣೆಗೆ ರೂಪಿಸಿದ ಯೋಜನೆಯನ್ನು ಕೋರ್ಟಿನ ಮುಂದೆ ಸಲ್ಲಿಸಬೇಕು. ಕೊರೋನ ಪ್ರತಿರೋಧ ಚಟುವಟಿಕೆಗೆ ಸಂಬಂಧಿಸಿ ಆರು ಹೈಕೋರ್ಟಿನಲ್ಲಿ ಕೇಸುಗಳು ಇವೆ ಎಂದು ಚೀಫ್ ಜಸ್ಟಿಸ್ ಎಸ್.ಎ. ಬೊಬ್ಡೆ ಹೇಳಿದರು. ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಪೀಠ ನಾಳೆ ಕೇಸು ಪರಿಗಣಿಸಲಿದೆ. ಪ್ರಕರಣದಲ್ಲಿ ಹರೀಶ್ ಸಾಳ್ವೆಯವರನ್ನು ಅಮಿಕಸ್ ಕ್ಯೂರಿಯಾಗಿ ನೇಮಕಗೊಳಿಸಲಾಗಿದೆ.