ಎಸ್ಸಿ ಎಸ್ಟಿ ಕಿರುಕುಳ ನಿಷೇಧ ಕಾನೂನು ದುರ್ಬಲಗೊಳಿಸಿದ ತೀರ್ಪು ರದ್ದು- ಸುಪ್ರೀಂ ಕೋರ್ಟು

0
615

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.1: ಎಸ್ಸಿ-ಎಸ್ಟಿ ಕಿರುಕುಳ ನಿರೋಧ ಕಾನೂನನ್ನು ದುರ್ಬಲಗೊಳಿಸಿದ ತೀರ್ಪು ರದ್ದುಗೊಂಡಿದೆ. ತೀರ್ಪಿನ ವಿರುದ್ಧ ಕೇಂದ್ರ ಸರಕಾರ ಮರುಪರಿಶೀಲನೆಗೆ ಅಪೀಲು ಸಲ್ಲಿಸಿತ್ತು. ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠದ ತೀರ್ಪು ಸಂವಿಧಾನ ಪರವಾಗಿಲ್ಲ ಎಂದು ಮೂವರು ಸದಸ್ಯರ ಪೀಠ ತೀರ್ಪಿನಲ್ಲಿ ಸೂಚಿಸಿದೆ. ಸುಪ್ರೀಂ ಕೋರ್ಟಿನ ಜಸ್ಟಿಸ್ ಅರುಣ್ ಮಿಶ್ರ, ಎಂ.ಆರ್ ಶಾ, ಬಿ.ಆರ್ ಗವಾಯಿಯವರಿದ್ದ ಪೀಠ ಅರ್ಜಿ ಸ್ವೀಕರಿಸಲು ನಿರ್ಧರಿಸಿತ್ತು.

ಎಸ್ಸಿ ಎಸ್ಟಿ ವಿಭಾಗದವರ ವಿರುದ್ಧ ದೌರ್ಜನ್ಯ ದೂರಿನಲ್ಲಿ ಪ್ರಾಥಮಿಕ ತನಿಖೆಯಲ್ಲಿ ಕೇಸು ದಾಖಲಿಸಬೇಕು ಎಂದು 2018 ಮಾರ್ಚ್ 28ಕ್ಕೆ ಇದೇ ಸುಪ್ರೀಂಕೋರ್ಟು ತೀರ್ಪು ನೀಡಿತ್ತು. ಕಾನೂನಿನ ದುರುಪಯೋಗ ಪರಿಗಣಿಸಿ ಈ ಆದೇಶವನ್ನು ಅಂದು ನೀಡಲಾಗಿತ್ತು. ಆದರೆ ಈ ಆದೇಶದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾದ್ದರಿಂದ ತೀರ್ಪನ್ನು ಮೀರಿ ನಿಲ್ಲಲು ಪಾರ್ಲಿಮೆಂಟಿನಲ್ಲಿ ಕಾನೂನು ತಿದ್ದುಪಡಿಯನ್ನು ಕೇಂದ್ರ ಸರಕಾರ ತಂದಿತ್ತು.