ರಿಯಾದ್,ಅ.1:ಇರಾನ್ನೊಂದಿಗೆ ಯುದ್ಧ ನಡೆದರೆ ಜಾಗತಿಕ ಅರ್ಥವ್ಯವಸ್ಥೆಗೆ ಹಾನಿಕರವಾಗಲಿದೆ ಎಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದರು. ರವಿವಾರ ಸೌದಿಯ ಚ್ಯಾನೆಲ್ ಚರ್ಚೆಯಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇರಾನ್ನೊಂದಿಗೆ ಯಾವುದೇ ಸೈನಿಕ ಘರ್ಷಣೆ ಜಾಗತಿಕ ಆರ್ಥಿಕತೆಯನ್ನು ಬಾಧಿಸುತ್ತದೆ ಎಂದು ಅವರು ಹೇಳಿದರು.
ಸಶಸ್ತ್ರ ಘರ್ಷಣೆ ನಡೆದರೆ ಕಚ್ಚಾ ತೈಲ ದರ ಊಹಿಸಲಾಗದಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಬಹುದು. ಜಗತ್ತಿನ ತೈಲ ವಿತರಣೆಯ ಶೇ.30ರಷ್ಟು ಈ ವಲಯದಿಂದ ಸರಬರಾಜು ಆಗುತ್ತಿದೆ. ಇದು ಜಾಗತಿಕ ಜಿಡಿಪಿಯ ಶೇ.4 ಅನ್ನು ಪ್ರತಿನಿಧಿಸುತ್ತಿದೆ ಎಂದು ಬಿನ್ ಸಲ್ಮಾನ್ ಹೇಳಿದರು.












