ಕೊರೋನಾ ಹಿನ್ನೆಲೆ: ಮುಂಬೈಯಲ್ಲಿ ಜ.31ರವರೆಗೆ ಶಾಲೆ ಬಂದ್

0
349

ಸನ್ಮಾರ್ಗ ವಾರ್ತೆ

ಮುಂಬೈ: ಒಮಿಕ್ರಾನ್ ಸಹಿತ ಕೊರೊನ ಪ್ರಕರಣಗಳು ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಮುಂಬೈಯಲ್ಲಿ ಶಾಲೆಗಳನ್ನು ಜನವರಿ 31ರವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ.

ಎಲ್ಲಾ ಮಾಧ್ಯಮಗಳ ಶಾಲೆಗಳನ್ನು ಮುಚ್ಚಲು ಕಾರ್ಪೊರೇಷನ್ ಮುಚ್ಚಲು ಆದೇಶಿಸಿದ್ದು, ಒಂದನೆಯ ತರಗತಿಯಿಂದ ಒಂಭತ್ತನೇ ತರಗತಿ ಹಾಗೂ ಪ್ರಥಮ ಪಿಯುಸಿಯವರೆಗೆ ತರಗತಿಯನ್ನು ಕೂಡ ಮುಚ್ಚಲು ಕಾರ್ಪೊರೇಷನ್ ನಿರ್ಧರಿಸಿತು.

ಆದರೆ ಈ ಮಕ್ಕಳಿಗೆ ಶಾಲಾಭ್ಯಾಸ ಮೊಟಕುಗೊಳ್ಳುವುದಿಲ್ಲ. ಆನ್‍ಲೈನ್ ತರಗತಿಗಳನ್ನು ಮಾಡಲಾಗುವುದು. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ತರಗತಿಯನ್ನು ಮುಚ್ಚುವುದಿಲ್ಲ ಎಂದು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ‌.