ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದ್ರೋಹ ಕಾನೂನು ಕೋಲೋನಿಯನ್ ಕಾನೂನು ಆಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸ್ವಾತಂತ್ರ್ಯ ಸಿಕ್ಕಿ ನಮಗೆ 75 ವರ್ಷ ಆಗಿದೆ. ಆ ಬಳಿಕವೂ ಇದರ ಅಗತ್ಯವಿದೆಯೇ ಎಂದು ಪರಿಶೀಲಿಸಬೇಕಾಗಿದೆ ಎಂದು ಕೋರ್ಟ್ ಹೇಳಿದೆ. ಕಾನೂನಿನ ಸಿಂಧುತ್ವ ಪರಿಶೀಲಿಸಿ ನೋಡಬೇಕು. ಈ ವಿಷಯದಲ್ಲಿ ಕೇಂದ್ರ ಸರಕಾರ ಅಭಿಪ್ರಾಯವನ್ನು ಕೇಳಲಾಗುವುದು ಎಂದು ಕೋರ್ಟ್ ತಿಳಿಸಿದೆ.
ದೇಶದ್ರೋಹ ವಸಾಹತುಶಾಹಿ ಕಾನೂನು ಆಗಿದೆ. ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದ ಬಳಿಕವೂ ಈ ಕಾನೂನು ಅಗತ್ಯವಿದೆಯೇ ಎಂಬುದು ಪರಿಶೀಲನೆಗೊಳಪಡಲಿ ಎಂದು ಚೀಫ್ ಜಸ್ಟಿಸ್ ಎನ್.ವಿ.ರಮಣ ಹೇಳಿದರು. ಮಹಾತ್ಮ ಗಾಂಧಿಯವರನ್ನು ಮತ್ತು ಬಾಲಗಂಗಾಧರ ತಿಲಕ್ರನ್ನು ಮೌನವಾಗಿಡಲು ಬ್ರಿಟೀಷರು ಈ ಕಾನೂನು ತಂದಿದ್ದರು ಎಂದು ಕೋರ್ಟ್ ಹೇಳಿತು.
ದೇಶದ್ರೋಹ ಕಾನೂನು ವಿರುದ್ಧ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟಿನ ಪರಿಗಣನೆಯಲ್ಲಿದೆ. ಅರ್ಜಿಗಳನ್ನು ಒಟ್ಟಿಗೆ ವಿಚಾರಣೆಗೊಳಪಡಿಸಲಾಗುವುದು. ಕಾನೂನು ದುರುಪಯೋಗ ಪಡಿಸುವ ಸಾಧ್ಯತೆಗಳಿವೆ ಎಂದು ಚೀಫ್ ಜಸ್ಟಿಸ್ ಹೇಳಿದರು.












