ನವಜೋತ್ ಸಿಂಗ್ ಸಿಧುಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಗದ್ದುಗೆ?

0
490

ಸನ್ಮಾರ್ಗ ವಾರ್ತೆ

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ನವ್‍ಜೋತ್ ಸಿಂಗ್ ಸಿಧುರ ನಡುವಿನ ವಿವಾದ ಪರಿಹರಿಸಲು ಹೊಸ ಪರಿಹಾರವನ್ನು ಕಾಂಗ್ರೆಸ್ ಹೈಕಮಾಂಡ್ ಕಂಡು ಹಿಡಿದಿದೆ. ಸಿಧುರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕಗೊಳಿಸಲಾಗುವುದು ಎಂದು ತಿಳಿದು ಬಂದಿದೆ. ಆದರೆ ಇದು ಅಧಿಕೃತವಾಗಿ ದೃಢಗೊಂಡಿಲ್ಲ.

ನವಜೋತ್ ಸಿಂಗ್ ಸಿಧು ಪಾರ್ಟಿ ಅಧ್ಯಕ್ಷನಾಗುವಾಗ ಕಾಂಗ್ರೆಸ್‍ಗೆ ಇಬ್ಬರು ಕಾರ್ಯಕಾರಿ ಅಧ್ಯಕ್ಷರು ಇರುತ್ತಾರೆ. ಇವರಲ್ಲಿ ಒಬ್ಬರು ದಲಿತ ವಿಭಾಗದವರು. ಈ ಕುರಿತ ಪ್ರಕಟನೆಯನ್ನು ಕಾಂಗ್ರೆಸ್ ಪಾರ್ಟಿ ಹೊರಡಿಸಲಿದೆ. ಅಮರೀಂದರ್ ಸಿಂಗ್ ನವಜೋತ್ ಸಿಂಗ್ ಸಿಧು ಪರಸ್ಪರ ಸಮಸ್ಯೆಯನ್ನು ಎರಡು ದಿವಸಗಳಲ್ಲಿ ಪರಿಹರಿಸುತ್ತೇವೆ ಎಂದು ಪಾರ್ಟಿ ವಕ್ತಾರ ಹರೀಶ್ ರಾವತ್ ಹೇಳಿದರು. ಸಿಧು ಪಾರ್ಟಿಯ ಭವಿಷ್ಯದ ನಾಯಕರು. ಇದನ್ನು ಮನಸ್ಸಲ್ಲಿಟ್ಟು ಪಾರ್ಟಿ ಅಂತಿಮ ನಿರ್ಣಯಕ್ಕೆ ಬರಲಿದೆ ಎಂದು ರಾವತ್ ತಿಳಿಸಿದ್ದಾರೆ.