ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಸ್ವಘೋಷಿತ ದೇವಮಾನವನ ವಿರುದ್ಧ ಇಂಟರ್‍ಫೋಲ್ ನೋಟಿಸ್

0
532

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅಪ್ರಾಪ್ತ ಬಾಲಕಿಯರ ಸಹಿತ ಹಲವಾರು ಮಂದಿಯ ಮೇಲೆ ಅತ್ಯಾಚಾರ ಮಾಡಿದ ಸ್ವಘೋಷಿತ ದೇವಮಾನವನ ವಿರುದ್ಧ ಇಂಟರ್‍ಫೋಲ್ ನೋಟಿಸು ಜಾರಿ ಮಾಡಿದೆ. ಸ್ವಘೋಷಿತ ಮಾನವ ವೀರೇಂದ್ರ ದೀಕ್ಷಿತ್ ಎಂಬಾತನಿಗೆ ನೋಟಿಸು ಜಾರಿ ಮಾಡಿದ್ದು ದಿಲ್ಲಿಯ ರೊಹಿಣಿಯಲ್ಲಿ ಈತ ಆಶ್ರಮ ನಡೆಸುತ್ತಿದ್ದ. 2017ರಿಂದ ವಿವಿಧ ಕೇಸುಗಳಲ್ಲಿ ಈತನ ವಿರುದ್ಧ ತನಿಖೆ ನಡೆಯುತ್ತಿದೆ. 2017ರಲ್ಲಿ ಆಧ್ಯಾತ್ಮಿಕ ವಿಶ್ವವಿದ್ಯಾನಿಲಯ ಆಶ್ರಮದಲ್ಲಿ ದಿಲ್ಲಿ ಪೊಲೀಸರು ಮತ್ತು ಮಹಿಳಾ ಆಯೋಗ ನಡೆಸಿದ ದಾಳಿಯಲ್ಲಿ 67 ಮಹಿಳೆಯರನ್ನು ರಕ್ಷಿಸಿದ್ದರು. ಇವರಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಾಗಿದ್ದರು. ಆಧ್ಯಾತ್ಮಿಕ ವಿಶ್ವವಿದ್ಯಾಲಯ ಎಂದು ಕರೆಯಲಾಗುತ್ತಿದ್ದ ಇಲ್ಲಿ ಹೆಣ್ಣು ಮಕ್ಕಳನ್ನು ಮೃಗಗಳಂತೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ತಂದೆತಾಯಿಯರಿಗೂ ಈ ಮಕ್ಕಳನ್ನು ನೋಡಲು ಬಿಡುತ್ತಿರಲಿಲ್ಲ.

2017ರಲ್ಲಿ ಈ ಪ್ರಕರಣವನ್ನು ದಿಲ್ಲಿ ಹೈಕೋರ್ಟು ಸಿಬಿಐಗೆ ಹಸ್ತಾಂತರಿಸಿತ್ತು. ನಂತರ ವಿಶೇಷ ತನಿಖಾ ತಂಡವನ್ನು ನೇಮಕಗೊಳಿಸಲಾಗಿತ್ತು. ಈತನ ಕುರಿತು ಯಾವುದಾದರೆ ಮಾಹಿತಿ ನೀಡುವವರಿಗೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಆದರೆ ಈತನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ನಂತರ ಈತನ ವಿರುದ್ಧ ಇಂಟರ್‍ಫೋಲ್ ನೋಟಿಸು ಜಾರಿ ಮಾಡಿದೆ. ಆಶ್ರಮದಲ್ಲಿದ್ದ ಈತನಿಗೆ 79 ವರ್ಷ ವಯಸ್ಸಾಗಿತ್ತು. ಸದ್ಯ ನೇಪಾಳದಲ್ಲಿದ್ದಾನೆ ಎನ್ನಲಾಗುತ್ತಿದ್ದು, ಜಾಗತಿಕ ಬಂಧನ ವಾರಂಟ್ ಹೊರಡಿಸಿದ್ದರಿಂದ ನೇಪಾಳ ಸರಕಾರಕ್ಕೆ ಈತನನ್ನು ಬಂಧಿಸಿ ಭಾರತಕ್ಕೆ ಕಳುಹಿಸಿಕೊಡಲು ಸಾಧ್ಯವಾಗಲಿದೆ.