ಬಾಗ್ದಾದ್‍ನಲ್ಲಿ ಅಜ್ಞಾತ ವ್ಯಕ್ತಿಯಿಂದ ಗುಂಡಿನ ದಾಳಿ 19 ಸಾವು

0
475

ಸನ್ಮಾರ್ಗ ವಾರ್ತೆ

ಬಾಗ್ದಾದ್,ಡಿ.7: ಇರಾಕ್ ರಾಜಧಾನಿ ಬಗ್ದಾದಿನಲ್ಲಿ ಅಜ್ಞಾತ ವ್ಯಕ್ತಿ ಗುಂಡು ಹಾರಿಸಿದ್ದು ಒಂಬತ್ತು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಎಪ್ಪತ್ತು ಮಂದಿ ಗಾಯಗೊಂಡಿದ್ದು ಸರಕಾರ ವಿರೋಧಿ ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇರಾಕ್ ಪ್ರಧಾನಿ ಅದೆಲ್ ಅಬ್ದುಲ್ ಮಹದಿ ರಾಜೀನಾಮೆ ಘೋಷಿಸಿದ್ದರು. ನಂತರ ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಆಕ್ರಮಣ ಇದು.

ಕೋವಿಯನ್ನು ಹಿಡಿದು ಬಂದ ದಾಳಿಕೋರ ಅಲ್ ಸಿಂಗ್ ಸೇತುವೆ ಸಮೀಪ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದನು. ನಂತರ ಸಮೀಪದ ಕಟ್ಟಡಕ್ಕೆ ಬೆಂಕಿ ಹಚ್ಚಿದನೆಂದು ವರದಿಯಾಗಿದೆ. ಬಗ್ದಾದ್ನ್ ತಹ್ರೀಕ್ ಸ್ಕ್ವಾರ್‌ನಲ್ಲಿ ಆಯುಧಧಾರಿ 13 ಮಂದಿಯನ್ನು ತಿವಿದು ಗಾಯಗೊಳಿಸಿದ ಘಟನೆ ಕಳೆದ ದಿವಸ ನಡೆದಿತ್ತು. ಸರಕಾರ ವಿರೋಧಿ ಪ್ರತಿಭಟನೆ ಆರಂಭವಾದ ಬಳಿಕ 400 ಮಂದಿ ಕೊಲ್ಲಲ್ಪಟ್ಟಿದ್ದಾರೆ. 20,000 ಮಂದಿ ಗಾಯಗೊಂಡಿದ್ದಾರೆ.