ಎಳೆಯ ಮಕ್ಕಳಿಗೆ ಲೈಂಗಿಕ ಅರಿವು ನೀಡದಿದ್ದರೆ…

0
1012

ಸನ್ಮಾರ್ಗ ವಾರ್ತೆ

ಸೌದಾ ಹಸನ್

ಬೆಳೆಯುತ್ತಿರುವ ಮಕ್ಕಳಿಗೆ ಯಾವುದನ್ನು ನೋಡಿದರೂ ಅದರಲ್ಲಿ ಕುತೂಹಲವಿರುತ್ತದೆ. ಅವರನ್ನು ವಿಸ್ಮಯಗೊಳಿಸುವಂತಹ ವಸ್ತುಗಳ ಸುತ್ತ ಅಪಾಯವಿದ್ದರೂ ಆ ಬಗ್ಗೆ ಚಿಂತಿಸದೆ ಅತ್ತ ಮುನ್ನುಗ್ಗುವುದ ನ್ನು ಕಾಣಬಹುದು. ಪ್ರತೀ ನಿಮಿಷವೂ ಮಗು ಜಗತ್ತಿನ ಕುರಿತು ಕಲಿಯುವ ಪ್ರಜ್ಞೆಯಲ್ಲಿರುತ್ತದೆ. ಸುತ್ತಮುತ್ತಲಿರುವ ಪ್ರತಿಯೊಂದು ವಿಷಯಗಳ ಕುರಿತು ಅರಿಯುವ ಕಾತರ ಉಂಟಾಗುತ್ತದೆ. ಹಾಗೆಯೇ ನಮ್ಮ ಅಂಗಾಂಗಗಳ ವಿಶೇಷವಾಗಿ ಲೈಂಗಿಕ ಅವಯವಗಳ ಬಗ್ಗೆಯೂ ಅರಿಯುವ ಕುತೂಹಲ ಅವರಲ್ಲಿರುತ್ತದೆ.

ವಿರುದ್ಧ ಲಿಂಗದ ಮಕ್ಕಳನ್ನು ಕಾಣುವಾಗ ಇದು ಏನು ಅವನದ್ದು/ಅವಳದ್ದು ಯಾಕೆ ಹೀಗೆ ಎಂದೆಲ್ಲಾ ಮಗು ಚಿಂತಿಸುತ್ತದೆ. ಮಾತನಾಡಲು ಪ್ರಾಪ್ತವಾದ ಮಗುವಾಗಿದ್ದರೆ ಅದು ನಿಷ್ಕಳಂಕ ಭಾವನೆಯಿಂದ ಯಾವಾಗಲಾದರೊಮ್ಮೆ ತಂದೆ ಅಥವಾ ತಾಯಿಯ ಜೊತೆ ಅದು ಕೇಳುವುದಿದೆ. ಲೈಂಗಿಕವಾದ ಸಂಶಯಗಳು ಅಜ್ಞತೆಗಳು ಸಾಮಾನ್ಯ ವಾಗಿ ಮಕ್ಕಳನ್ನು ಅವರ ವಯಸ್ಸಿಗನುಗುಣವಾಗಿ ಸಹಜವಾಗಿ ಕಾಡುತ್ತದೆ. ಆದ್ದರಿಂದ ಮಕ್ಕಳು ಯಾವುದಾದರೂ ಪ್ರಶ್ನೆ ಕೇಳಿದರೆ ಅದನ್ನು ತಡೆಯಲೇಬಾರದು. ಅದಕ್ಕೆ ಬಹಳ ಸಂದರ್ಭೋ ಚಿತವಾಗ ಮಗುವಿನ ಪ್ರಾಯ ಬುದ್ದಿಮತ್ತೆಗೆ ಅನುಸಾರವಾಗಿ ಉತ್ತರಿಸಬೇಕು. ಇಂತಹ ಪ್ರಶ್ನೆಗಳು ಎದುರಾದಾಗ ಸಂಕೋಚ ತೋರದೆ ತಂದೆ-ತಾಯಂದಿರು ಪರಿಹರಿಸಬೇಕು. ತಾಯಿ ಅದನ್ನು ಸುಂದರವಾಗಿ ಪರಿಸಲು ಯೋಗ್ಯಳಾಗಿದ್ದಾಳೆ.

ಲೈಂಗಿಕ ಅಂಗಾಂಗಗಳನ್ನು ಶುಚಿಗೊಳಿಸಲು ಒಳ ಉಡುಪುಗಳನ್ನು ಸ್ವಚ್ಚವಾಗಿಡಲು ಹೇಳಿ ಕೊಡಬೇಕು. ಲೈಂಗಿಕ ಅಂಗಾಂಗಗಳು ನಮ್ಮ ದೇಹದ ಖಾಸಗಿ ಭಾಗಗಳಾಗಿವೆ. ಅದನ್ನು ತಂದೆ ತಾಯಂದಿರು ಮತ್ತು ಮನೆಯ ಇತರರನ್ನು ಹೊರತುಪಡಿಸಿ ಯಾರೂ ಸ್ಪರ್ಷಿಸಲು ಅನುಮತಿಸ ಬಾರದು ಎಂದು ಗಂಡು ಮಕ್ಕಳೊಡನೆಯೂ ಹೆಣ್ಮಕ್ಕಳೊಡನೆಯೂ ಹೇಳಿ ಕೊಡಬೇಕು. ಈ ಸಂದರ್ಭದಲ್ಲಿ ಕೆಟ್ಟ ಸ್ಪರ್ಶ ಮತ್ತು ಸರಿಯಾದ ಸ್ಪರ್ಶದ ಬಗ್ಗೆ ಅರಿಯಬೇಕು. ತಂದೆ-ತಾಯಂದಿರು ಇಂತಹ ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಡಲು ತಕ್ಕುದಾದ ಸಂದರ್ಭವನ್ನು ಬಳಸಬೇಕು. ಹಾಗೆಯೇ ನೇರವಾದ ಮನಸ್ಸು ಬಿಚ್ಚಿ ಮಾತ ನಾಡಲು ಮಕ್ಕಳು ಮತ್ತ ಹೆತ್ತವರ ನಡುವೆ ಸಂವಹನ ಇರಬೇಕು. ಎ

ಳೆಯ ಮಕ್ಕಳಿಗೆ ತಮ್ಮ ಶರೀರದ ಅಂಗಾಂಗದ ಕುರಿತು ಪ್ರಜ್ಞಾವಂತರನ್ನಾಗಿ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಹೆಚ್ಚಿನ ತಂದೆ-ತಾಯಂದಿರಿಗೆ ತಿಳಿದಿಲ್ಲ ಎಂಬ ವಾಸ್ತವ ವನ್ನು ತಳ್ಳಿ ಹಾಕಲಾಗದು. ಮಕ್ಕಳು ಪ್ರಾಪ್ತರಾಗುವ ತನಕ ಅವರನ್ನು ಸ್ನಾನ ಮಾಡಿಸಿ ಅವರ ತಲೆಯನ್ನು ಒರೆಸಿ ಕೊಟ್ಟು ಹಂತ ಹಂತವಾಗಿ ಅವರು ಸ್ವತಃ ಎಲ್ಲವನ್ನು ಮಾಡುವಂತೆ ಪ್ರೇರೇಪಿಸ ಬೇಕು. ಎಲ್ಲ ಕೆಲಸಗಳನ್ನು ಸ್ವಯಂ ನಿರ್ವಹಿಸಲು ಪ್ರಾಪ್ತರಾಗುವ ವರೆಗೆ ತರಬೇತಿ ನೀಡುತ್ತಿರಬೇಕು. ಅಂದರೆ ಪ್ರಾರಂಭದ ಹಂತದಲ್ಲಿ ಎಲ್ಲವೂ ತಂದೆ-ತಾಯಂದಿರ ಗರಡಿಯಲ್ಲಿಯೇ ಪಳಗಬೇಕು. ನಂತರ ಅವರಿಗೆ ಬಿಟ್ಟುಕೊಡಬೇಕು. ಮಕ್ಕಳ ಸಾಮಥ್ರ್ಯದ ಬಗ್ಗೆ ನಂಬಿಕೆ ಇಡದ ತಂದೆ ತಾಯಂದಿರು ಮತ್ತು ಇರುವುದಕ್ಕಿಂತಲೂ ಹೆಚ್ಚಿನ ನಂಬಿಕೆ ಇಡುವುದು ಇದು ಎರಡೂ ಸರಿಯಲ್ಲ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಅಪರಿಚಿತರಾದ ವ್ಯಕ್ತಿಯಿಂದ ಅಥವಾ ಬಂಧು ವಿನಿಂದ ಅಥವಾ ಅಪ್ತ ಸಂಬಂಧಿಕರಿಂದ ಮಕ್ಕಳ ದೇಹಕ್ಕೆ ಅನುಚಿತವಾದ ಸ್ಪರ್ಶ ಉಂಟಾ ಗಿದೆ ಎಂದು ಭಾವಿಸೋಣ. ಆದರೆ ಮಕ್ಕಳು ಅದನ್ನು ಬಹಳ ಸುಲಭವಾಗಿ ಅರ್ಥೈಸಲು ಸಾಧ್ಯವಾಗುತ್ತದೆ. ಏನೋ ಒಂದು ಕೆಟ್ಟ ವರ್ತನೆ ಯನ್ನು ಈ ವ್ಯಕ್ತಿ ನನ್ನಲ್ಲಿ ತೋರುತ್ತಿದೆ ಎಂಬ ಭಾವನೆ ಮಗುವಿನಲ್ಲಿ ಉದ್ಭವಿಸುತ್ತದೆ. ಮಗುವಿನ ಅಂತರಂಗದ ಶಬ್ದದ ಮುಖಾಂತರ ಮಗುವಿನ ಅರಿವಿಗೆ ಬರುತ್ತದೆ. ಆದರೆ ಅದನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ಮಗುವಿಗೆ ಅರಿವು ಇಲ್ಲದೆ ಒಳಗೊಳಗೆ ಚಡಪಡಿಸುವುದು. ಕಾರಣವನ್ನು ಅವರಿಗೆ ಯಾರೂ ಹೇಳಿಕೊಡ ಬೇಕಾಗಿಲ್ಲ.

ಕಳವಳಗೊಂಡು ದಿಗ್ಭ್ರಾಂತವಾದ ಮಗು ಏನು ಮಾಡಬೇಕೆಂದು ತೋಚದೆ ಅದರ ಕೈಕಾಲುಗಳು ಕೂಡಾ ನಿಶ್ಚಲವಾಗುತ್ತದೆ. ಆದರೆ ಹೃದಯಹೀನತೆಯಿಂದ ವರ್ತಿಸುತ್ತಿರುವ ಕ್ರೂರ ಮನಸ್ಸು ಸಂತಸ ಅನುಭವಿಸುತ್ತಿರಬಹುದು. ಅವರ ಸೈಕೋ ಮನಸ್ಸು ಮಗುವನ್ನು ಬೆದರಿಸಿ ಸುಮ್ಮನಿರಲು ಹೇಳುತ್ತದೆ.

ನಿರಂತರವಾಗಿ ಆ ಮಗು ದುಷ್ಟನ ಚೇಷ್ಟೆಗೆ ಬಲಿಯಾಗುತ್ತದೆ. ಆ ಸಂದರ್ಭದಲ್ಲಿನ ಮಗುವಿನ ಮಾನಸಿಕ ಅವಸ್ಥೆಯ ಕುರಿತು ಯಾರೂ ಚಿಂತಿಸುವುದಿಲ್ಲ. ಇನ್ನು ತನಗಾಗುತ್ತಿರುವ ಕೆಟ್ಟ ಅನುಭವಗಳನ್ನು ಮನಸ್ಸು ತೆರೆದು ಹೇಳುವುದಾ ದರೂ ಯಾರಲ್ಲಿ? ಹೇಳುವುದಾದರೂ ಹೇಗೆ? ಹೇಳಿದರೆ ಕೇಳುವವರು ಯಾರಿದ್ದಾರೆ? ಇಂತಹ ಪ್ರಶ್ನೆಗಳು ಆ ಮಗುವಿನ ಮನದಲ್ಲಿ ತುಂಬಿರುತ್ತದೆ. ಇನ್ನು ಹೇಗಾದರೂ ಬಹಿರಂಗ ಆಗುವ ಸಂದರ್ಭ ಬಂದಾಗ ಮಗು ತನ್ನ ಧೈರ್ಯವನ್ನೆಲ್ಲಾ ತಂದು ಕೊಂಡು ತನ್ನ ಮಾತಾಪಿತರ ಬಳಿ ಹೇಳುತ್ತೇನೆ ಎಂದು ಬೆದರಿಸಿದರೆ ಆ ಮಗು ಆತನ ಕೈಯಲ್ಲಿಯೇ ಪ್ರಾಣ ಬಿಡಬೇಕಾಗಿ ಬರಬಹುದು. ಇಂತಹ ಸಂದರ್ಭಗಳು ಬಾರದಂತೆ ತಂದೆ ತಾಯಂದಿರು ಎಚ್ಚರಿಕೆ ವಹಿಸಬೇಕು. ಒಮ್ಮೆ ಇಂತಹ ದುರ್ಘಟನೆ ಸಂಭವಿಸಿದರೆ ಅದು ಮರಣದ ತನಕ ಮರೆಯಲಾರದ ದುಖವಾಗಿ ಮಾ ರ್ಪಡಬಹುದು.

ಮಗುವಿನ ದುರವಸ್ಥೆಗೆ ಕಾರಣವಾದರೆ ಸ್ವತಃ ಅವನು ತನ್ನೊಳಗೆ ತನ್ನನ್ನೇ ಕ್ಷಮಿಸಲಾರದಂತಹ ಮಾನಸಿಕ ಯಾತನೆ ಅನುಭವಿಸಬೇಕಾಗಬಹುದು. ಮಕ್ಕಳಿಗೆ ಇವನ್ನೆಲ್ಲಾ ಹೇಳಿಕೊಡುವ ಅಗತ್ಯತೆಯನ್ನು ಮನಗಾಣದೆ ನಾಚಿಕೆ ಸಂಕೋಚದ ಕಾರಣದಿಂದ ಇದಕ್ಕೂ ಮುಂದಾಗದ ತಂದೆ ತಾಯಂದಿರ ನಿರ್ಲಕ್ಷದ ಕಾರಣವಾಗಿ ಲೈಂಗಿಕವಾಗಿ ಶೋಷಣೆಗೊಳಗಾದ ಅದೆಷ್ಟೋ ಮಕ್ಕಳು ನಮ್ಮ ಸಮಾಜದಲ್ಲಿದ್ದಾರೆ. ಬಳಿಕ ತಾನು ಮಾಡಿದ್ದು ಎಂತಹ ಅಪರಾಧ ಎಂದು ಅವೆನ್ನೆಲ್ಲವನ್ನೂ ಸ್ಮರಿಸಿ ಜೀವನಾದ್ಯಂತ ವ್ಯಥೆ ಪಡಬೇಕಾಗಬಹುದು. ಹೀಗೆ ದುಃಖಿತ ತಂದೆ ತಾಯಂದಿರೂ ಸಾಕಷ್ಟು ಮಂದಿ ಇದ್ದಾರೆ. ಆದ್ದರಿಂದ ಮಕ್ಕಳನ್ನು ಎಲ್ಲವನ್ನೂ ಮನಬಿಚ್ಚಿ ಮಾತನಾಡಿ ಹೆಚ್ಚು ಪ್ರಬುದ್ಧರನ್ನಾಗಿ ಮಾಡಬೇಕು.

ಬಾಲ್ಯದಲ್ಲಿ ಮಕ್ಕಳ ಮನಸ್ಸು ತಾಳಲಾರ ದಂತಹ ಯಾತನೆಯ ಅನುಭವಗಳು ಉಂಟಾದರೆ ಅದು ಅವರ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾನಸಿಕವಾದ ದೈಹಿಕವಾದ ಹಿಂಸೆ ದೌರ್ಜನ್ಯ ಗಳು ನಡೆಯುತ್ತಿರುವ ಈ ಜಗತ್ತಿನ ಬಗ್ಗೆ ಸರಿಯಾದ ರೀತಿಯಲ್ಲಿ ತಿಳಿಯುವ ಮೊದಲೇ ದೌರ್ಜನ್ಯ ಕಿರುಕುಳಕ್ಕೆ ಈಡಾಗಿ ಎಲ್ಲರಿಂದಲೂ ಹೀನಾಯವಾಗಿ ನಿಂದನೆಗೊಳ ಗಾದ ಮಕ್ಕಳನ್ನು ಆ ಕೊಳಚೆಯಿಂದ ಮೇಲಕ್ಕೆ ತರುವುದು ಸಾಮಾನ್ಯ ವಿಚಾರವಲ್ಲ. ಸಹಜ ಸ್ಥಿತಿಗೆ ಬರಲಾಗದಂತಹ ಮಾನಸಿಕ ಯಾತನೆ ಗೊಳಗಾಗಿ ಕೊನೆಗೆ ಮಾನಸಿಕ ರೋಗಿಯಾಗಿ ಮಾರ್ಪಡುವ ಸಾಧ್ಯತೆಯೂ ಇದೆ. ಆದರೆ ಇದು ತಂದೆ-ತಾಯಿಯರಿಗೆ ಅಲ್ಲದೆ ಇನ್ಯಾರಿಗೆ? ಇಂದಿನ ಕಾಲದಲ್ಲಿ ತಂದೆ-ತಾಯಂದಿರು ಉದ್ಯೋ ಗಕ್ಕೆ ತೆರಳಿ ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸದೆ ಇರಬಹುದು.

ಅನೇಕ ಬಾರಿ ಮಕ್ಕಳು ಲೈಂಗಿಕವಾಗಿ ಶೋಷಣೆಗೊಳಗಾಗುವುದು ಕುಟುಂಬದ ಯಾವು ದಾದರೂ ಸದಸ್ಯರಿಂದ. ತಂದೆ-ತಾಯಂದಿರ ಮಿತ್ರರಿಂದ ಅಥವಾ ನೆರೆಮನೆಯ ವ್ಯಕ್ತಿಯಿಂದಾಗಿ ರುತ್ತದೆ. ತಂದೆ ತಾಯಿಯ ಜೊತೆ ಉತ್ತಮವಾಗಿ ವರ್ತಿಸುವ ಓರ್ವ ವ್ಯಕ್ತಿ ತನ್ನೊಂದಿಗೆ ಹೀನ ರೀತಿಯಲ್ಲಿ ವರ್ತಿಸುವುದನ್ನು ತಂದೆ-ತಾಯಂದಿರ ಜೊತೆ ಹೇಳಲು ಪರದಾಡ ಬಹುದು. ಇನ್ನು ಆ ವ್ಯಕ್ತಿ ಸಮಾಜದಲ್ಲಿ ಉತ್ತಮ ಹೆಸರು ಇರುವವನಾಗಿದ್ದರೆ ಕೇಳುವುದೇ ಬೇಡ. ಇಂತಹ ಸಂದರ್ಭದಲ್ಲಿ ಅವರು ತೀವ್ರ ಮಾನಸಿಕ ಯಾತನೆಯನ್ನು ಅನುಭವಿಸುವರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.