ಚೆನ್ನೈಯಲ್ಲಿಯೂ ಶಾಹೀನ್ ಬಾಗ್; ಪುಲಿಯಂತೋಪಿನಲ್ಲಿ ರಾತ್ರೆ ಹಗಲು ಪ್ರತಿಭಟನೆ

0
528

ಸನ್ಮಾರ್ಗ ವಾರ್ತೆ

ಚೆನ್ನೈ, ಫೆ. 24: ಚೆನ್ನೈಯಲ್ಲಿ ಶಾಹಿನ್ ಬಾಗ್ ಮಾದರಿ ಹಗಲು ರಾತ್ರೆ ಪ್ರತಿಭಟನೆ ಬಹಳಷ್ಟು ಜಾಗಗಳಿಗೆ ವ್ಯಾಪಕಗೊಂಡಿದೆ. ವಣಾರಪೆಟ್ಟಿಯಲ್ಲಿ ಹನ್ನೊಂದು ದಿವಸಗಳಿಂದ ಪ್ರತಿಭಟನೆ ನಡೆಯುತ್ತಿದ್ದು ನಗರದ ಪುಲಿಯಂತೊಪಿನಲ್ಲಿ ಹೊಸದಾಗಿ ಹಗಲು ರಾತ್ರೆ ಪ್ರತಿಭಟನೆ ಆರಂಭವಾಗಿದೆ. ಪುಲಿಯಂತೋಪ್ ಆಟ್ಟುತೊಟ್ಟಿಯಲ್ಲಿ ಶುಕ್ರವಾರ ಸಂಜೆಯಿಂದ ಪ್ರತಿಭಟನೆ ಆರಂಭವಾಗಿದ್ದು ಮಹಿಳೆಯರು ಮಕ್ಕಳು ಸಹಿತ 500ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಿರತರಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ಹಿಂಪಡೆಯುವುದು, ಈ ಕಾನೂನು ವಿರುದ್ಧ ತಮಿಳ್ನಾಡು ವಿಧಾನಸಭೆಯಲ್ಲಿ ಪ್ರಸ್ತಾವ ಪಾಸು ಮಾಡುವುದು ಮುಂತಾದ ಬೇಡಿಕೆಗಳನ್ನು ಪ್ರತಿಭಟನಾಕಾರರು ಸರಕಾರದ ಮುಂದಿಟ್ಟಿದ್ದಾರೆ.

ಈಗ ಚೆನ್ನೈಯ ವಣ್ಣಾರಪೇಟ್, ಮನ್ನಾಡಿ, ಪುಳಿಯಂತೊಪ್ ಗಳಲ್ಲಿ ರಾತ್ರೆ ಹಗಲು ಪ್ರತಿಭಟನೆ ನಡೆಯುತ್ತಿದೆ.