105ನೆ ವಯಸ್ಸಿನಲ್ಲಿ ನಾಲ್ಕನೆ ತರಗತಿ ಪಾಸಾದ ಅಜ್ಜಿ: ಭಾಗೀರಥಮ್ಮನ ಭಗೀರಥ ಶ್ರಮ

0
314

ಸನ್ಮಾರ್ಗ ವಾರ್ತೆ

ಕೇರಳ, ಫೆ. 24: ತನ್ನ 105ನೇ ವಯಸ್ಸಿನಲ್ಲಿ ಅಜ್ಜಿಯೊಬ್ಬರು ನಾಲ್ಕನೆ ತರಗತಿ ಪಾಸು ಮಾಡಿದ್ದಾರೆ. ಕೊಲ್ಲಂನ ಭಾಗೀರತಿ ಅಮ್ಮರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಮನ್‍ಕಿ ಬಾತ್‍ನ 62ನೆ ಎಪಿಸೋಡಿನಲ್ಲಿ ಭಾಗೀರತಿ ಅಮ್ಮರ ಶಿಕ್ಷಣದ ಆಸಕ್ತಿಯನ್ನು ಪ್ರಧಾನಿ ಶ್ಲಾಘಿಸಿದರು. ಭಾಗೀರತಿ ಅಮ್ಮನವರ ಕುರಿತು ಮೋದಿ ಹೀಗೆ ಹೇಳೀರು. ಬಾಲ್ಯದಲ್ಲಿ ತಾಯಿಯನ್ನು ಕಳಕೊಂಡ, ಸಣ್ಣಪ್ರಾಯದಲ್ಲಿ ಮದುವೆಯಾದ ಬಳಿಕ ಪತಿಯನ್ನೂ ಕಳಕೊಂಡರು. ಆದರೆ ಭಾಗೀರಥಿಯಮ್ಮ ತಮ್ಮ ಆಸಕ್ತಿಯನ್ನು ತೊರಯಲಿಲ್ಲ. ಹತ್ತನೇ ವಯಸ್ಸಿನಲ್ಲಿ ಶಾಲಾ ವಿದ್ಯಾಭ್ಯಾಸ ತೊರೆಯಬೇಕಾಯಿತು. ಈಗ 105ನೆ ವಯಸ್ಸಿನಲ್ಲಿ ಶಾಲೆಗೆ ಸೇರಿದರು. ಕಲಿತರು. ಈ ವಯಸ್ಸಿನಲ್ಲಿ ನಾಲ್ಕನೆ ತರಗತಿ ಸಮಾನ ಪರೀಕ್ಷೆ ಬರೆದು. ಶೇ 75ರಷ್ಟು ಮಾರ್ಕಿನೊಂದಿಗೆ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಲೆಕ್ಕದಲ್ಲಿ ಶೇ. 100ರಷ್ಟು ಅಂಕ ಪಡೆದಿದ್ದಾರೆ. ಭಾಗೀರಥಿಯಮ್ಮನಂತಹವರು ಈ ನಾಡಿನ ಶಕ್ತಿಯಾಗಿದ್ದಾರೆ. ಒಂದು ದೊಡ್ಡ ಪ್ರೇರಣೆಯ ಮೂಲವಾಗಿದ್ದಾರೆ.

ಭಾಗಿರಥಿಯಮ್ಮನವರಿಗೆ ನಾನು ವಿಶೇಷ ಪ್ರಣಾಮ ಸಲ್ಲಿಸುವೆ” ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೂಡ ನಮ್ಮ ಉತ್ಸಾಹ ಇಚ್ಛಾಶಕ್ತಿ ಯಾವುದೇ ಪರಿಸ್ಥಿತಿಯನ್ನುಮೀರಿ ನಿಲ್ಲಲು ಪರ್ಯಾಪ್ತವಾಗಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.

ಕಳೆದ ನವೆಂಬರ್ ನಲ್ಲಿ ಭಾಗೀರಥಿ ಅಮ್ಮ ಕೇರಳದ ಸಾಕ್ಷರತಾ ಮಿಶನ್ ಆಯೋಜಿಸಿದ್ದ ನಾಲ್ಕನೆ ತರಗತಿ ಸಮಾನ ಪರೀಕ್ಷೆಯಲ್ಲಿ ಪಾಸಾಗಿದ್ದರು. ಮನೆಯ ಕಷ್ಟಗಳ ನಿಮಿತ್ತ ಭಾಗೀರಥಿ ಅಮ್ಮನಿಗೆ ಒಂಬತ್ತನೇ ವಯಸ್ಸಿನಲ್ಲಿ ಶಾಲೆ ಬಿಟ್ಟು ಮದುವೆಯಾಗಬೇಕಾಯಿತು. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಾದರೂ ಅವರ ಕಲಿಯುವ ಆಸೆ ಬತ್ತಿಹೋಗಿರಲಿಲ್ಲ. ಇದನ್ನು ಮಕ್ಕಳಿಗೆ ತಿಳಿಸಿದಾಗ ಅವರಿಗೆಸಾಕ್ಷರತಾ ಮಿಶನ್ ಪರೀಕ್ಷೆ ಬರೆಯುವ ಅವಕಾಶ ಮಾಡಿಕೊಟ್ಟಿದ್ದರು.