ಸನ್ಮಾರ್ಗ ವಾರ್ತೆ
ಡಮಸ್ಕಸ್, ಫೆ. 24: ಸಿರಿಯದ ರಾಜಧಾನಿ ಡಮಸ್ಕಸ್ನಲ್ಲಿ ಇಸ್ರೇಲ್ನ ಸೇನೆ ವಾಯು ದಾಳಿ ಮಾಡಿದೆ. ಡಮಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇಸ್ರೇಲ್ ದಾಳಿ ನಡೆಸಿದ್ದನ್ನು ಸಿರಿಯದ ಮಾನವಹಕ್ಕು ಸಂಘಟನೆ ಬಹಿರಂಗಪಡಿಸಿದೆ. ವಿಮಾನ ನಿಲ್ದಾನಕ್ಕೆ ಮಿಸೈಲ್ಗಳು ಬೀಳುವ ಮೊದಲೇ ಸಿರಿಯ ಅದನ್ನು ನಿಷ್ಕ್ರಿಯ ಗೊಳಿಸಿದೆ. ಆದರೆ ಇಬ್ಬರು ಕೊಲ್ಲಲ್ಪಟ್ಟರು ಎಂದು ಮಾನವಹಕ್ಕು ಸಂಘಟನೆ ತಿಳಿಸಿದೆ.
ಡಮಸ್ಕಸ್ನ ದಾಳಿಯಲ್ಲಿ ನಮ್ಮ ಇಬ್ಬರು ಯೋಧರು ಹತ್ಯೆಯಾಗಿದ್ದಾರೆ ಎಂದು ಸಿರಿಯದ ಬಂಡುಕೋರ ಗುಂಪು ತಿಳಿಸಿದೆ. ಡಮಸ್ಕಸ್ಗೆ ದಾಳಿ ಮಾಡಿದ್ದನ್ನು ಇಸ್ರೇಲ್ ದೃಢೀಕರಿಸಿದೆ. ಫೆಬ್ರವರಿ ಹದಿಮೂರರಂದು ಇದೇ ರೀತಿಯಲ್ಲಿ ಡಮಸ್ಕಸ್ ಮೇಲೆ ವ್ಯೋಮ ದಾಳಿ ನಡೆದಿತ್ತು. ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು.
ಗಾಝದ ಮೇಲೆ ಮಿಸೈಲ್ ದಾಳಿಯಿಂದ ನಾಶ ನಷ್ಟಗಳು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಗಾಝದ ರಾಫಕ್ಕೆ ಮಿಸೈಲುಗಳು ಬಂದಪ್ಪಳಿಸಿವೆ ಎಂದು ಅವು ತಿಳಿಸಿವೆ.












