ಶಾಹೀನ್‍ಬಾಗ್ ಪ್ರತಿಭಟನೆ: 69 ದಿವಸಗಳಿಂದ ಮುಚ್ಚಿದ್ದ ರಸ್ತೆಯನ್ನು ತೆರೆದ ಉತ್ತರಪ್ರದೇಶ ಪೊಲೀಸರು

0
952

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 21: ಶಾಹಿನ್ ಬಾಗ್‍ನಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಚ್ಚಿದ್ದ ಫರೀದಾಬದ್- ನೊಯಿಡಾ ಹೈವೆಯ ಶಾಹಿನ್ ಬಾಗ್ ಕಾಳಿಂಗ ಕುಂಜ್ ರಸ್ತೆಯನ್ನು ಉತ್ತರಪ್ರದೇಶ ಪೊಲೀಸರು ತೆರೆದಿದ್ದಾರೆ. ಫರೀದಾಬಾದ್ ನ ನೊಯಿಡಾದೊಂದಿಗೆ ಜೋಡಿಸುವ ಪ್ರಧಾನ ರಸ್ತೆಯಿದು. ಪ್ರತಿಭಟನೆಯ ನಂತರ ಕಳೆದ 69 ದಿವಸಗಳಿಂದ ರಸ್ತೆ ಮುಚ್ಚಿಡಲಾಗಿತ್ತು. ಸುಪ್ರೀಂಕೋರ್ಟು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದರಿಂದ ಉತ್ತರ ಪ್ರದೇಶ ಪೊಲೀಸರು ರಸ್ತೆ ತೆರೆಯಲು ಮುಂದಾಗಿದ್ದಾರೆ.

ಎರಡು ಕಿಲೊಮೀಟರ್ ಉದ್ದದ ಶಾಹಿನ್‍ಬಾಗ್-ಕಾಳಿಂಗ್ ಕುಂಜ್ ರಸ್ತೆಯು ಸಂಸ್ಥೆಗಳು, ಮನೆಗಳು , ರೆಸ್ಟೋರೆಂಟ್ ಗಳಿರುವ ಪ್ರದೇಶವಾಗಿದೆ. ಅಟ್ಲಾಂನ್‍ನ ವಾಟರ್ ಪಾರ್ಕಿನಲ್ಲಿ ರಸ್ತೆ ಕೊನೆಗೊಳ್ಳೂತ್ತದೆ. ನೊಯಿಡಾ-ಗ್ರೇಟರ್ ನೋಯಿಡಾ ಎಕ್ಸ್ ಪ್ರೆಸ್ ಹೈವೆಗೆ ಸಮಾಂತರವಾಗಿರುವ ದಾರಿಯನ್ನು ವಾಹನ ಸಂಚಾರಕ್ಕೆ ಬಳಸಲಾಗುತ್ತಿದೆ.

ಇದೇವೇಳೆ, ಶಾಹಿನ್‍ಬಾಗ್ ಸಮೀಪದ ಜಿಡಿ ಬಿರ್ಲಾ ರಸ್ತೆ, ಕಾಳಿಂಗ್ ಕುಂಜ್ ಬ್ರಿಡ್ಜ್, ಅಮ್ರಪಾಲಿ ರೋಡ್, ಓಕ್ಲಾ ಬ್ಯಾರೇಜ್ ರೋಡ್, ಓಕ್ಲಾ ಬೆಡ್ಸ್ವಾಂಗ್‍ಚರಿ ರೋಡ್, ದಾದ್ರಿ ಮೆಯಿನ್ ರೋಡ್, ನೊಯಿಡಾ-ಗ್ರೇಟರ್ ನೊಯಿಡಾ ಎಕ್ಸ್ ಪ್ರೆಸ್ ಮೊದಲಾದ ರಸ್ತೆಗಳೆಲ್ಲವನ್ನೂ ತೆರೆದಿಟ್ಟು ಎಲ್ಲರ ಗಮನವನ್ನು ಶಾಹಿನ್ ಬಾಗ್ – ಕಾಳಿಕುಂಜ್ ರಸ್ತೆಗೆ ಹರಿಸುವ ಕೆಲಸವನ್ನು ಪೊಲೀಸರು ಮಾಡಿದ್ದರೆಂದು ಪ್ರತಿಭಟನಾಕಾರರು ಹೇಳಿದ್ದಾರೆ.