ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 18: ಶಾಹಿನ್ಬಾಗ್ ಪ್ರತಿಭಟನೆಗೆ 60 ದಿನಗಳಾದರೂ ನೀವು ಏನು ಕ್ರಮಗಳನ್ನು ಕೈಗೊಂಡಿರಿ ಎಂದು ಕೇಂದ್ರ ಸರಕಾರವನ್ನು ಸುಪ್ರೀಂಕೋರ್ಟು ಪ್ರಶ್ನಿಸಿದೆ. ಜನರ ಪ್ರತಿಭಟನೆಗೆ ಅನುಮತಿಸಬೇಕು. ಪ್ರತಿಭಟನೆಯು ಕಾನೂನು ನಿರ್ಮಾಣಕ್ಕಿಂತಲೂ ಉತ್ತಮ ದಾರಿ. ಅದು ಅಭಿಪ್ರಾಯ ರೂಪಿಸುವುದಕ್ಕೆ ಸಹಕಾರಿ ಎಂದು ಜಸ್ಟಿಸ್ ಕೆ ಎಂ ಜೋಸೆಫ್ ಹೇಳಿದರು.
ಸಮಸ್ಯೆ ಪರಿಹರಿಸಲು ಪ್ರತಿಭಟನಾಕಾರರೊಡನೆ ಮಾತುಕತೆ ಸಾಧ್ಯವೆ ಎಂದು ಅವರು ಕೇಳಿದಾಗ ಅಡ್ವೋಕೇಟ್ ಅಮೀನಾ ಅವರು, ತನಗೆ ಸಮಯ ಕೊಟ್ಟರೆ ಮಾತಾಡುವೆ ಎಂದು ಹೇಳಿದರು. ಸಾವಿರಾರು ಪ್ರತಿಭಟನೆಗಳು ನಡೆದರೂ ತೊಂದರೆ ಇಲ್ಲ, ರಸ್ತೆಗೆ ತಡೆಯುಂಟುಮಾಡಬಾರದೆಂದು ಹೇಳಲಾಗುತ್ತಿದೆಎಂದು ಜಸ್ಟಿಸ್ ಜೋಸೆಫ್ ಹೇಳಿದರು. ರಸ್ತೆಯ ಹತ್ತಿರ ಎಲ್ಲಿಗಾದರೂ ಪ್ರತಿಭಟನೆಯನ್ನು ವರ್ಗಾಯಿಸಲು ಶಾಹಿನ್ ಬಾಗ್ ಪ್ರತಿಭಟನಾಕಾರರೊಡನೆ ಮಾತುಕತೆ ನಡೆಸಬೇಕೆಂದು ಜಸ್ಟಿಸ್ ಎಸ್.ಕೆ. ಕೌಲ್ ಹೇಳಿದರು. ಮಕ್ಕಳು ಮಹಿಳೆಯರನ್ನು ಗುರಾಣಿಗಿಸಲು ಪ್ರತಿಭಟನಾಕಾರರು ಯತ್ನಿಸುತ್ತಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಹೇಳಿದರು.
ಇದೇವೇಳೆ , ಶಾಹಿನ್ ಬಾಗ್ ಹೋರಾಟಗಾರರೊಂದಿಗೆ ಚರ್ಚಿಸಲು ಮಧ್ಯಸ್ಥಿಕೆದಾರರಾಗಿ ನೇಮಿಸಲಾದ ಸುಪ್ರೀಂಕೋಟು ಮಾಜಿ ನ್ಯಾಯಾಧೀಶ ಕುರಿಯನ್ ಜೋಸೆಫ್ ಮತ್ತು ಬೀಂ ಆರ್ಮಿ ನಾಯಕ ಚಂದ್ರಶೇಖರ್ ಆಝಾದ್ರನ್ನು ನಾವು ಅಂಗೀಕರಿಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಹೇಳಿದರು. ಪ್ರತಿಭಟನಾಕಾರರ ಪರವಿರುವಂತೆ ಸುಪ್ರೀಂಕೋರ್ಟು ಬಗ್ಗೆ ಜನರಲ್ಲಿ ಭಾವನೆ ಮೂಡಬಾರದು. ಸಂವಿಧಾನ ಸಂಸ್ಥೆಗಳು ಪ್ರತಿಭಟನಾಕಾರರೊಂದಿಗೆ ಯಾಚಿಸಿದಂತೆಯೂ ಅನಿಸಬಾರದು ಎಂದು ಸಾಲಿಸಿಟರ್ ಜನರಲ್ ಮನವರಿಕೆ ಮಾಡಿಕೊಟ್ಟರು. ಅರುವತ್ತು ದಿವಸ ನೀವು ಏನೂ ಮಾಡದ್ದರಿಂದ ಕೋಟು ಮಧ್ಯಪ್ರವೇಶಿಸುತ್ತಿದೆ ಜಸ್ಟಿಸ್ ಜೋಸೆಫ್ ಹೇಳಿದರು. ಪ್ರ
ತಿಭಟನೆಯ ತೆರವಿಗೆ ಅರ್ಜಿ ಸಲ್ಲಿಸಿದವರು ಮಧ್ಯಂತರ ಆದೇಶವು ಸುಪ್ರೀಂಕೋರ್ಟಿನ ಮಹತ್ವ ಎತ್ತಿಹಿಡಿಯಬೇಕೆಂದು ಹೇಳಿದಾಗ ತಮ್ಮ ಪರ ತೀರ್ಪು ಬಂದರೆ ಆ ತೀರ್ಪನ್ನು ಒಳ್ಳೆಯದೆಂದು ಹೇಳುತ್ತಾರೆ. ವಿರೋಧ ತೀರ್ಪು ಬಂದರೆ ಟೀಕಿಸುತ್ತಾರೆ. ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿಲ್ಲ ಎಂದು ಜಸ್ಟಿಸ್ ಕೌಲ್ ಹೇಳಿದರು.












