ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯಿಂದ ವಸತಿ ಸಹಿತ ಉಚಿತ ಶಿಕ್ಷಣಕ್ಕೆ ಫೆ.11ರಂದು ಆನ್‌‌ಲೈನ್‌ ಪ್ರವೇಶ ಪರೀಕ್ಷೆ

0
538

ಸನ್ಮಾರ್ಗ ವಾರ್ತೆ

ಬೀದರ್: ಬೀದರ್‌ನಲ್ಲಿ ಸ್ಥಾಪನೆಗೊಂಡು ದೇಶದ 42 ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ರಾಜ್ಯದ ಪ್ರತಿಷ್ಠಿತ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯು ಶಾಲಾ/ಕಾಲೇಜುಗಳ ಶುಲ್ಕವನ್ನು ಪಾವತಿಸಲು ಅಶಕ್ತರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡುವ ಶಾಹೀನ್ ಸ್ಕಾಲರ್ ಗ್ರೂಪ್(ಎಸ್.ಎಸ್.ಜಿ) ಯೋಜನೆಯನ್ನು ಹಮ್ಮಿಕೊಂಡಿದೆ. ಫೆ.11ರಂದು ನಡೆಯಲಿರುವ ಆನ್‍ಲೈನ್ ಪ್ರವೇಶ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ.

8ನೇ ತರಗತಿಯಿಂದ ಮೊದಲ್ಗೊಂಡು ಯಾವುದೇ ಪದವಿ ಪಡೆದಿರುವ ತನಕದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಲು ಅರ್ಹರಾಗಿದ್ದು, 9ನೇ ತರಗತಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣ (ವಿಜ್ಞಾನ,ಕಲೆ ಮತ್ತು ವಾಣಿಜ್ಯ) ನೀಟ್, ಜೆಇಇ, ಕ್ಲಾಟ್, ಸಿಇಟಿ, ಕೆವಿಪಿವೈ ಮುಂತಾದ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್, ಯುಪಿಎಸ್‍ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸಿಎ ಇಂಟಿಗ್ರೇಟೆಡ್, ಎಲ್‍ಎಲ್‍ಬಿ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮುಂತಾದ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

ಜೊತೆಗೆ, ಯಾವುದೇ ತರಗತಿಯಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿ ಆಲಿಮಾ/ಹಾಫಿಝ್ ಕೋರ್ಸ್‌ಗಳನ್ನು ಮಾಡಿರುವ ವಿದ್ಯಾರ್ಥಿಗಳಿಗೆ ನೇರವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು, ಪಾಸಾಗಿ ಶಿಕ್ಷಣವನ್ನು ಮುಂದುವರಿಸುವ ವಿಶೇಷ ತರಗತಿಗಳೂ ಶಾಹೀನ್‍ನಲ್ಲಿದೆ. ಆಸಕ್ತ ವಿದ್ಯಾರ್ಥಿಗಳು ಫೆ.10ರ ಒಳಗಾಗಿ www.shaheengroup.org ಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿರಿ.

ಉಮರ್ ಯು.ಹೆಚ್,
ಮೊ.ಸಂ. 9845054191
ವಿಭಾಗೀಯ ಸಂಯೋಜಕ
ಶಾಹೀನ್ ಸ್ಕಾಲರ್ ಗ್ರೂಪ್, ಬೀದರ್