ಹಿಂದೂಸ್ಥಾನಿ ಮುಸ್ಲಿಮ್ ಆಗಿದ್ದಕ್ಕೆ ಅಭಿಮಾನವಿದೆ: ಗುಲಾಮ್ ನಬಿ ಆಝಾದ್

0
685

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹಿಂದೂಸ್ಥಾನಿ ಮುಸ್ಲಿಂ ಆಗಿದ್ದಕ್ಕೆ ಅಭಿಮಾನವಿದೆ ಎಂದು ಗುಲಾಮ್ ನಬಿ ಆಝಾದ್ ಹೇಳಿದರು. ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಸಂಸದರಿಗೆ ವಿದಾಯನೀಡುವ ಸಮಾರಂಭದಲ್ಲಿ ಅವರು ಮಾತಾಡುತ್ತಿದ್ದರು. ಜಮ್ಮು-ಕಾಶ್ಮೀರದಿಂದ ದಿಲ್ಲಿಗೆ ಬಂದ ತನ್ನ ರಾಜಕೀಯ ಜೀವನವನ್ನು ಉಲ್ಲೇಖಿಸಿ ಮಾಡಿದ ಭಾಷಣದಲ್ಲಿ ಕೆಲವೊಮ್ಮೆ ಭಾವನಾತ್ಮಕಗೊಂಡರು.

ನಾನು ಒಮ್ಮೆಯೂ ಪಾಕಿಸ್ತಾನಕ್ಕೆ ಹೋಗಿಲ್ಲ. ಅದೊಂದು ಭಾಗ್ಯವೆಂದು ನಾನು ನಂಬಿದ್ದೇನೆ. ಒಮ್ಮೆಯೂ ಪಾಕಿಸ್ತಾನಕ್ಕೆ ಹೋಗದ ಭಾಗ್ಯವಂತರಲ್ಲಿ ನಾನೂ ಒಬ್ಬ. ಪಾಕಿಸ್ತಾನದ ಪರಿಸ್ಥಿತಿಯ ಕುರಿತು ಓದಿ ತಿಳಿದುಕೊಂಡಾಗ ಹಿಂದೂಸ್ಥಾನಿ ಮುಸ್ಲಿಂ ಆಗಿದ್ದಕ್ಕೆ ನನಗೆ ಹೆಚ್ಚು ಅಭಿಮಾನವಿದೆ ಎಂದು ಅವರು ಹೇಳಿದರು.

ತನ್ನ ಕುರಿತು ಭಾವನಾತ್ಮಕವಾಗಿ ಮಾತಾಡಿದ ಪ್ರಧಾನಿಗೆ ಗುಲಾಮ್ ನಬಿ ಆಝಾದ್‌ರನ್ನುದ್ದೇಶಿಸಿ ಮಾತನಾಡಿದ ಅವರು, “ಕೆಲವೊಮ್ಮೆ ನಮ್ಮ‌ ನಡುವೆ ಸದನದಲ್ಲಿ ವಾಗ್ವಾದ ನಡೆದಿದೆ. ಅದ್ಯಾವುದನ್ನೂ ನಾನು ವೈಯಕ್ತಿಕ ನೆಲೆಯಲ್ಲಿ ಸ್ವೀಕರಿಸಿಲ್ಲ ಎಂದು ಗುಲಾಮ್ ನಬಿ ಆಜಾದ್ ಬೆಟ್ಟು ಮಾಡಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜ್‍ಪೇಯಿ ಅವರಿಂದ ಸದನವನ್ನು ನಿರ್ವಹಿಸುವ ಕುರಿತು ತಾನು ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ ಎಂದು ಅವರು ಹೇಳಿದರು.