ಶರಣ್ ಪಂಪ್ ವೆಲ್ ದ್ವೇಷ ಭಾಷಣ: ಮುಖ್ಯಮಂತ್ರಿಗಳಿಗೊಂದು ಪತ್ರ

0
209

ಸನ್ಮಾರ್ಗ ವಾರ್ತೆ

ಮಾನ್ಯ ಮುಖ್ಯ ಮಂತ್ರಿಯವರೇ,

ದೇಶದ ಪ್ರಧಾನ ಮಂತ್ರಿಯವರು ಮುಸಲ್ಮಾನರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಕರೆ ನೀಡಿರುವ ಬೆನ್ನಲ್ಲೇ ಶರಣ್ ಪಂಪ್ ವೆಲ್ ರವರು ಮುಸ್ಲಿಮ್ ದ್ವೇಷವನ್ನು ಹೊರಹಾಕಿರುವುದು ಆತಂಕಕ್ಕೆ ಕಾರಣವಾಗಿದೆ. ನಿಮ್ಮ ಪಕ್ಷದ ಯುವಕರು ಆರ್ಥಿಕವಾಗಿ ಕಂಗೆಟ್ಟಿರುವರೇ? ಅವರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲವೇ? ಹಾಗಿದ್ದರೆ ನಿಮ್ಮ‌ ಪಕ್ಷದ ಯುವಕರೊಂದಿಗೆ ಸಮಾಲೋಚನೆ ನಡೆಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು.ಪಕ್ಷದ ಕಾರ್ಯಕರ್ತರ ಆರ್ಥಿಕ ಸಂಕಷ್ಟ ಅಮಾಯಕರ ಹತ್ಯೆಗೆ ಕಾರಣವಾಗದಿರಲಿ. ಸಮಾಜದಲ್ಲಿ ಸರ್ವ ಧರ್ಮೀಯರೂ ಶಾಂತಿಯುತವಾಗಿ ಬದುಕುವಾಗ ದ್ವೇಷಕ್ಕೆ ಕರೆ ನೀಡುವುದರ ಉದ್ದೇಶವೇನು?

ಕಾಂಗ್ರೆಸ್ ಪಕ್ಷದ ಮೇಲೆ ದ್ವೇಷವಿದ್ದರೆ ಮುಸಲ್ಮಾನರ ಹತ್ಯೆಗೆ ಕರೆ ನೀಡುವುದೇಕೆ? ಈಗಾಗಲೇ ಎಲ್ಲ ಧರ್ಮದ ಅಮಾಯಕ ಜೀವಗಳು ಬಲಿಯಾಗಿವೆ. ಕೊಲೆಯಾದ ಬಳಿಕ ಪರಿಹಾರ ಘೋಷಿಸುವುದಕ್ಕಿಂತ ಇಂತಹ ದ್ವೇಷಕ್ಕೆ ಆಸ್ಪದ ನೀಡದಂತೆ ಪಕ್ಷದ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಿ ಮುನ್ನೆಚ್ಚರಿಕೆ ವಹಿಸುವುದು ಜಾಣತನವಲ್ಲವೇ? ಈಗಾಗಲೇ ದ್ವೇಷ ಭಾಷಣಗಳಿಗೆ ಅಮಾಯಕ ಕುಟುಂಬಗಳು ಬಲಿಯಾಗಿವೆ. ಅನಾಥ ಕುಟುಂಬಗಳ ಕಣ್ಣೀರಿನ ಶಾಪಕ್ಕೆ ಗುರಿಯಾಗಬೇಡಿ. ಪಕ್ಷದ ಕಾರ್ಯಕರ್ತರೊಂದಿಗೆ ಮಾಡುವ ಆಪ್ತ ಸಮಾಲೋಚನೆಯಿಂದ ಪ್ರೀತಿಯ ವಾತಾವರಣ ಬೆಳೆದುಬರುವುದು. ಶೀಘ್ರವೇ ಸೌಹಾರ್ದ ಸಭೆಗಳನ್ನು ಜಿಲ್ಲಾಮಟ್ಟದಲ್ಲಿ ಆಯೋಜಿಸಬೇಕು.ದೇಶದ ಪ್ರಗತಿಗೆ ಇಂತಹ ಸಭೆಗಳ ತುರ್ತು ಅಗತ್ಯವಿದೆ. ಸಂವಿಧಾನದ ಆಶಯದಂತೆ ಕಾನೂನು ರೂಪಿಸಬೇಕಾದುದು ಸರಕಾರದ ಕರ್ತವ್ಯ. ಎಲ್ಲವೂ ಮುಗಿದ ಮೇಲೆ ಶಾಂತಿ ಸಭೆ ಪ್ರಯೋಜನವಾಗದು.

ಶಮೀರ ಜಹಾನ್ ಮಂಗಳೂರು