ನಮ್ಮವರ ತಪ್ಪಿನಿಂದಲೇ ಮಿಗ್ -17 ಹೆಲಿಕಾಪ್ಟರ್ ಪತನ: ಆರು ತಿಂಗಳ ಬಳಿಕ ಒಪ್ಪಿಕೊಂಡ ಸೇನೆ

0
679

ಸನ್ಮಾರ್ಗ ವಾರ್ತೆ-

ಭಾರತೀಯ ವಾಯುಪಡೆ (ಐಎಎಫ್) ಮಿಗ್ -17 ಹೆಲಿಕಾಪ್ಟರ್ ಫೆಬ್ರವರಿ 27 ರಂದು ಕಾಶ್ಮೀರದಲ್ಲಿ ಅಪಘಾತಕ್ಕೀಡಾದುದಕ್ಕೆ ನಮ್ಮ ಎಡವಟ್ಟೇ ಕಾರಣ ಎಂದು ಏರ್ ಚೀಫ್ ಮಾರ್ಷಲ್ (ಎಸಿಎಂ) ಆರ್.ಕೆ.ಎಸ್. ಭದೌರಿಯಾ ಶುಕ್ರವಾರ ಹೇಳಿದ್ದಾರೆ. ಐಎಎಫ್ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿರುವುದು ಇದೇ ಮೊದಲು.

ಈ ತಪ್ಪಿಗಾಗಿ ಇಬ್ಬರು ಐಎಎಫ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಅದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲಾಗಿದೆ ಎಂದು ಐಎಎಫ್ ಮುಖ್ಯಸ್ಥರಾಗಿ ತಮ್ಮ ಮೊದಲ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ಎಸಿಎಂ ಬಿ.ಎಸ್. ಧನೋವಾ ಅವರಿಂದ ಸೆಪ್ಟೆಂಬರ್ 30 ರಂದು 26 ನೇ ಐಎಎಫ್ ಮುಖ್ಯಸ್ಥರಾಗಿ ಎಸಿಎಂ ಭದೌರಿ ಅಧಿಕಾರ ವಹಿಸಿಕೊಂಡಿದ್ದರು.

ಫೆಬ್ರವರಿ 27 ರ ಬೆಳಿಗ್ಗೆ, ಭಾರತ ಮತ್ತು ಪಾಕಿಸ್ತಾನದ ಫೈಟರ್ ಜೆಟ್‌ಗಳು ನೌಶೇರಾ ವಲಯದ ಮೇಲೆ ಹೋರಾಟದಲ್ಲಿ ತೊಡಗಿತ್ತು ಮತ್ತು ಶ್ರೀನಗರದಿಂದ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಮಿಗ್-17 ಬುಡ್ಗಾಮ್‌ನಲ್ಲಿ ಅಪ್ಪಳಿಸಿತು.

ವಿಮಾನದಲ್ಲಿದ್ದ ಎಲ್ಲಾ ಆರು ಸಿಬ್ಬಂದಿ ಸಾವನ್ನಪ್ಪಿದ್ದರು. ವಿಮಾನ ಅಪಘಾತಕ್ಕೆ ಕಾರಣವಾದ ಗ್ರೂಪ್ ಕ್ಯಾಪ್ಟನ್ ಸೇರಿದಂತೆ ಕನಿಷ್ಠ ನಾಲ್ಕು ಅಧಿಕಾರಿಗಳನ್ನು ಸಿಒಐ ಪತ್ತೆ ಮಾಡಿದೆ ಎಂದು ರಕ್ಷಣಾ ಮೂಲಗಳು ಈ ಹಿಂದೆ ತಿಳಿಸಿವೆ.