ಸನ್ಮಾರ್ಗ ವಾರ್ತೆ
ಲುಧಿಯಾನ,ಅ.4:ಭಟ್ಟಿಯಾ ಗ್ರಾಮದ ಬಳಿ ಗುರುವಾರ ಲುಧಿಯಾನ ಜಲಂಧರ್ ಹೈವೆಯಲ್ಲಿ ರಸ್ತೆ ಅಪಘಾತದಲ್ಲಿ ಅರುವತ್ತು ವರ್ಷದ ಮಹಿಳೆ ಮೃತಪಟ್ಟಿದ್ದರೂ ತನಂತರ ಒಂದರ ಮೇಲೊಂದರಂತೆ ವಾಹನಗಳು ಮೃತದೇಹದ ಮೇಲೆ ಹಾದು ಹೋಗಿವೆ.
ಸಂಜೆ ಏಳು ಗಂಟೆಗೆ ಭಟ್ಟಿಯಾ ಗ್ರಾಮದ ಜಸ್ಸಿಯ ಎಂಬಲ್ಲಿನ ಜಿಂದರಕೌರ್ನಲ್ಲಿ ಮೂರುಚಕ್ರ ವಾಹನದಿಂದ ಇಳಿದು ತಮ್ಮ ಮನೆಯ ಕಡೆಗೆ ಹೋಗುತ್ತಿದ್ದರು. ನಕೊದರ್ ಎಂಬಲ್ಲಿಗೆ ಔಷಧಿ ಖರೀದಿಸಲು ಹೋಗಿ ಅವರು ಮರಳುತ್ತಿದ್ದು ಮನೆಯ ಎದುರು ಹೆದ್ದಾರಿಯಿದೆ. ಅದನ್ನು ದಾಟುವಾಗ ವಾಹನವೊಂದು ಅವರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಮಹಿಳೆ ರಸ್ತೆಗೆ ಬಿದ್ದರು. ಹಿಂದಿನಿಂದ ಬಂದ ಲಾರಿ ಮತ್ತು ಇತರ ಎರಡು ವಾಹನಗಳು ಮಹಿಳೆಯ ಮೇಲೆ ಹರಿದು ಹೋಗಿವೆ. ಪರಿಣಾಮವಾಗಿ ಮಹಿಳೆಯ ಮೃತದೇಹ ತುಂಡುತುಂಡಾಗಿ ಬೇರ್ಪಟ್ಟಿತು.
ಘಟನೆಯ ವಿವರ ತಿಳಿದು ಘಟನಾ ಸ್ಥಳಕ್ಕೆ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಜನಕ್ ರಾಜ್ ಸಿಬ್ಬಂದಿಗಳೊಂದಿಗೆ ಆಗಮಿಸಿದರು. ನಂತರ ಮೃತದೇಹವನ್ನು ಮೇಲೆ ಎತ್ತಲಾಯಿತು. ಆಟೊದಲ್ಲಿ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಢಿಕ್ಕಿ ಹೊಡೆದ ಟೊಯೊಟಾ ಕಾರಿನ ನಂಬರ್ ಪ್ಲೇಟ್ನ ತುಂಡು ಲಭಿಸಿದ್ದು ಇದರ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












