ಶುಕ್ರವಾರದ ಅದಾನ್ ಕರೆಯನ್ನು ರೇಡಿಯೊ, ಟಿವಿಯಗಳಲ್ಲಿ ನೇರ ಪ್ರಸಾರ ಮಾಡುತ್ತೇವೆ- ನ್ಯೂಝಿಲೆಂಡಿನ ಪ್ರಧಾನಿ ಜೆಸಿಂತಾ ಅರ್ಡೆನ್;

0
1490

ನ್ಯೂಝಿಲೆಂಡ್, ಮಾ. 21: ಭಯೋತ್ಪಾದನಾ ದಾಳಿಯಲ್ಲಿ ಹತ್ಯೆಯಾದವರ ಗೌರವಸೂಚಕವಾಗಿ ನ್ಯೂಝಿಲೆಂಡಿನ ಪ್ರಧಾನಿ ಜೆಸಿಂತಾ ಆರ್ಡನ್ ಶುಕ್ರವಾರದ ಅದಾನ್ ಕರೆಯನ್ನು ನ್ಯೂಝಿಲೆಂಡಿನ ಅಧಿಕೃತ ಟೆಲಿವಿಷನ್ ನೆಟ್ ವರ್ಕ್ ಮತ್ತು ರೇಡಿಯೊ ಮೂಲಕ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನ್ಯೂಝಿಲೆಂಡಿನ್ ಅಧಿಕೃತ ಟಿವಿ ನೆಟ್‍ವರ್ಕ್ ಟಿವಿ ಎನ್. ಝೆಡ್, ಮತ್ತು ಆರ್‍ಎನ್‍ಝೆಡ್ ಮೂಲಕ ಅದಾನ್ ಪ್ರಸಾರವಾಗಲಿದೆ.

ದೇಶದ ಕೋವಿ ಮತ್ತು ಸುರಕ್ಷೆ ವಿಷಯ ಸಹಿತ ಹಲವು ವಿಷಯಗಳಲ್ಲಿ ಪರಿಹಾರ ಕಂಡು ಹುಡುಕಲಾಗುವುದು ಎಂದು ಪ್ರಧಾನಿ ಹೇಳಿದರು. ಭಯೋತ್ಪಾದನಾ ದಾಳಿಯಲ್ಲಿ ಹತರಾದವರ ಮೃತದೇಹ ಇಂದು ಸಂಸ್ಕರಿಸಲಾಗುತ್ತಿದ್ದು ಇದೇ ವೇಳೆ ಜೆಸಿಂತಾ ಕ್ರೈಸ್ಟ್ ಚರ್ಚ್‍ಗೆ ಬಂದಿದ್ದಾರೆ. ಹತ್ಯೆಯಾದವರ ಕುಟುಂಬದವರ ದುಃಖದಲ್ಲಿ ಅವರು ಭಾಗಿಯಾಗಿ ಸಂತೈಸಿದರು. ದೇಶ ಬಿಳಿಯವಾದಿ ಮತ್ತು ಬಲಪಂಥೀಯ ತೀವ್ರವಾದಿಗಳಿಂದ ಮುಕ್ತವಾಗಿಲ್ಲ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

ನ್ಯೂಝಿಲೆಂಡಿನ ವಿಶೇಷ ಸಮಾರಂಭ ಪವಿತ್ರ ಕುರ್‍ಆನ್ ಪಾರಾಯಣದೊಂದಿಗೆ ಆರಂಭವಾಗಿತ್ತು. ಐವತ್ತು ಮಂದಿ ಹತರಾದ ಘಟನೆಯಲ್ಲಿ ಪಾರ್ಲಿಮೆಂಟಿನ ವಿಶೇಷ ಸಮಾವೇಶ ಕರೆಯಲಾಗಿತ್ತು. ಎಲ್ಲರಿಗೂ ಶಾಂತಿಯ ಶುಭಾಶಯ ಕೋರಿದ ಪ್ರಧಾನಿ ಬಲಿಪಶುಗಳ ಕುಟುಂಬಗಳಿಗೆ ಬೆಂಬಲ ಸೂಚಿಸಿದರು. ಈ ಹಿಂದೆ ಮುಸ್ಲಿಮರನ್ನು ಸಂತೈಸುವ ನಿಟ್ಟಿನಲ್ಲಿ ಜೆಸಿಂತಾ ಹಿಜಾಬ್ ಧರಿಸಿದ್ದರು.