ಸನ್ಮಾರ್ಗ ವಾರ್ತೆ
ಮಂಗಳೂರು,ಜೂ.25: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (ಎಸ್.ಐ.ಓ) ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವೂ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಇಲ್ಲಿಗೆ ಸ್ಯಾನಿಟೈಸರ್ ಮತ್ತು ಸ್ಯಾನಿಟೈಜ್ ಸ್ಟಾಂಡ್ , ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ವಿತರಿಸಲಾಯಿತು.
ಎಸ್‌ಐಓ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಅಶೀರುದ್ದೀನ್ ಮಂಜನಾಡಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಶಾಲಾ ಮುಖ್ಯ ಶಿಕ್ಷಕರಾದ ಸಂತೋಷ್ ಟಿ.ಏನ್, SIO ಉಳ್ಳಾಲ ಘಟಕದ ಅಷ್ಫಾಕ್, ಫಝಲ್ ಪಿಲಾರ್, ಪಕ್ಕಲಡ್ಕ ಘಟಕದ ಸಾಜಿದ್, ಝಮೀರ್ ಉಪಸ್ತಿತರಿದ್ದರು. ಎಸ್‌ಐಓ ಉಳ್ಳಾಲ ಘಟಕ ಅಧ್ಯಕ್ಷರಾದ ನಿಝಾಮುದ್ದೀನ್ ಮತ್ತು ಎಚ್‌ಆರ್‌ಎಸ್ ಮಂಗಳೂರು ಸಹಕರಿಸಿದರು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












