ಲಾಕ್‍ಡೌನ್‍ನಿಂದಾಗಿ ಉದ್ಯೋಗ ನಷ್ಟ: ಗಾಂಜಾ ಮಾರುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಬಂಧನ

0
609

ಸನ್ಮಾರ್ಗ ವಾರ್ತೆ

ಮುಂಬೈ,ನ.7: ಮೊಬೈಲ್ ಆಪ್ ಮೂಲಕ ಮಾದಕವಸ್ತು ಮಾರಾಟ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮುಂಬೈ ನಾರ್ಕೊಟಿಕ್ ಪೊಲೀಸರು ಬಂಧಿಸಿದ್ದಾರೆ. ಲಾಕ್‍ಡೌನ್‍ನಲ್ಲಿ ಕೆಲಸ ಕಳಕೊಂಡ ಇಂಜಿನಿಯರ್ ಮಾದಕವಸ್ತು ಮಾರಾಟ ಶುರುಮಾಡಿದ್ದ.

ಅಮೆರಿಕದ ತನ್ನ ಸಂಬಂಧಿಕರಿಂದ ಮಾಕದ ವಸ್ತು ತರಿಸಿಕೊಂಡು ಕೊರಿಯರ್ ಮೂಲಕ ಇಡೀ ದೇಶದಲ್ಲಿ ಮಾರಾಟ ಮಾಡುತ್ತಿದ್ದ. ಆಂಟಿ ನಾರ್ಕೊಟಿಕ್ ಸೆಲ್ಲ (ಎಎನ್‍ಸಿ) ಯಶ್ ಕಲಾನಿ ಎಂಬ ಸಾಫ್ಟ್‌ವೇರ್ ಇಂಜಿಯನರನ್ನು ಬಂಧಿಸಿದೆ.

ಬಾಂದ್ರದಲ್ಲಿ ಇಬ್ಬರನ್ನು ಎಎನ್‍ಸಿ ಬಂಧಿಸಿದಾಗ ಬೃಹತ್ ಮಾದಕದ್ರವ್ಯ ಜಾಲದ ಸುಳಿವು ಸಿಕ್ಕಿತ್ತು. 1.62 ಕೋಟಿ ರೂಪಾಯಿ ಗಾಂಜಾ ಇವರಿಂದ ಪತ್ತೆಯಾಗಿದೆ. ಭಾರತದಲ್ಲಿ ಗ್ರಾಮ್ 1800ರೂಪಾಯಿಯಿಂದ 3000 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದರು.