ಸನ್ಮಾರ್ಗ ವಾರ್ತೆ
ನೋಯ್ಡಾದಲ್ಲಿ ವರದಕ್ಷಿಣೆಗಾಗಿ ಮಹಿಳೆಯೊಬ್ಬಳಿಗೆ ಬೆಂಕಿ ಹಚ್ಚಿದ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. 28 ವರ್ಷದ ನಿಕ್ಕಿ ಭಟ್ಟಿ ಅವರನ್ನು ಪತಿ ವಿಪಿನ್ ಮತ್ತು ಕುಟುಂಬದ ಸದಸ್ಯರು 36 ಲಕ್ಷ ರೂಪಾಯಿ ಹಾಗೂ ಕಾರು ಬೇಡಿಕೆಯನ್ನು ಇಟ್ಟು ಕಿರುಕುಳ ನೀಡುತ್ತಿದ್ದರು. ಆಗಸ್ಟ್ 21 ರಂದು ಜಗಳದ ವೇಳೆ ಆಕೆಯನ್ನು ಕ್ರೂರವಾಗಿ ಸುಟ್ಟು ಕೊಲೆ ಮಾಡಲಾಗಿದೆ.
ಈ ಕುರಿತು ಮಾಜಿ ಐಪಿಎಸ್ ಕಿರಣ್ ಬೇಡಿ ಆಕ್ರೋಶ ವ್ಯಕ್ತಪಡಿಸಿದ್ದು, “ಇದು ಮಧ್ಯಕಾಲೀನ ಯುಗದ ಮನಸ್ಥಿತಿಯ ಪ್ರತಿಬಿಂಬವಾಗಿದೆ. ಗಂಡು ಮಕ್ಕಳು ಆಸ್ತಿ ಮತ್ತು ಹೆಣ್ಣು ಮಕ್ಕಳನ್ನು ಶಾಪವೆಂದು ನೋಡುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿಕ್ಕಿ ತಮ್ಮ ಏಳು ವರ್ಷದ ಮಗನ ಭವಿಷ್ಯಕ್ಕಾಗಿ ಎಲ್ಲವೂ ಸರಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಹಿಸಿಕೊಂಡಿದ್ದರೂ ಕೊನೆಗೆ ಜೀವಂತವಾಗಿ ಸುಟ್ಟುಹಾಕಲ್ಪಟ್ಟಿದ್ದಾರೆ. ಸಹೋದರಿ ಕಾಂಚನಾ ಪೊಲೀಸರಿಗೆ ದೂರು ನೀಡಿದ್ದು, ವಿಪಿನ್, ಆತನ ತಾಯಿ ದಯಾ, ತಂದೆ ಸತ್ಯವೀರ್ ಮತ್ತು ಸಹೋದರ ರೋಹಿತ್ ರನ್ನು ಪೋಲೀಸರು ಬಂಧಿಸಿದ್ದಾರೆ.












