ಸನ್ಮಾರ್ಗ ವಾರ್ತೆ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ MEIF ವಿದ್ಯಾ ಸಂಸ್ಥೆಗಳ ಶಿಕ್ಷಕರಿಗೆ ಎರಡನೇ ಹಂತದ ಎರಡು ದಿವಸಗಳ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರವನ್ನು ಪ್ರೆಸಿಡೆನ್ಸಿ ಸ್ಕೂಲ್ ವಾಮಂಜೂರ್ ನಲ್ಲಿ ಜನವರಿ 17 ಮತ್ತು 18 ರಂದು ಜರುಗಿತು.
ಯೆನೆಪೋಯ ಶಾಲೆ ಮತ್ತು ಪಿಯು ಕಾಲೇಜಿನ ಶೈಕ್ಷಣಿಕ ಮತ್ತು ಕಾರ್ಯಾಚರಣೆಗಳ ನಿರ್ದೇಶಕಿ ಮಿಶ್ರಿಯ ಜಾವೇದ್, ಪ್ರೆಸಿಡೆನ್ಸಿ ಸ್ಕೂಲ್ ಬೆಂಗಳೂರು ಮತ್ತು ಮಂಗಳೂರಿನ ಪ್ರಿನ್ಸಿಪಾಲ್ ಮತ್ತು ಡೈರೆಕ್ಟರ್ ಭುವನೇಶ್ವರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೀಫ್ ನ (MEIF) ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಅವತು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಪರಿಣಿತ ತಂಡದವರಾದ ರಾಜೇಶ್ವರಿ, ಲಿಪಿಕಾ, ಜಯಶ್ರೀ ಕಾರ್ಯಗಾರವನ್ನು ನಡೆಸಿಕೊಟ್ಟರು.
ಆರಂಭದಲ್ಲಿ ಮಂಗಳೂರು ಪ್ರೆಸಿಡೆನ್ಸಿ ಪ್ರಾಂಶುಪಾಲರಾದ ಶೈಲಾ ಸಾಲ್ತಾನ ಸ್ಕೂಲ್ ಸ್ವಾಗತಿಸಿ, ಕಾರ್ಡಿನೇಟರ್ ಲೊಲಿತಾ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಪ್ರೆಸಿಡೆನ್ಸಿ ಸ್ಕೂಲ್ ಮಂಗಳೂರು ಇದರ ಕಾರ್ಡಿನೇಟರ್ ಜಾವಿದ್, ಕಾರ್ಯದರ್ಶಿ ಅನ್ವರ್ ಗೂಡಿನಬಳಿ, ಶಾರಿಕ್, ಕೋಶಾಧಿಕಾರಿ ನಿಸಾರ್, ಕಸ್ವೀನರ್ ಫರ್ವೀಝ್ ಅಲಿ ಉಪಸ್ಥಿತರಿದ್ದರು.
ಉಭಯ ಜಿಲ್ಲೆಗಳ ಇಂಗ್ಲಿಷ್ ಭಾಷಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮೊದಲನೇ ಹಂತದಲ್ಲಿ ಮೂರು ದಿನಗಳ ಕಾರ್ಯಕ್ರಮ ನವೆಂಬರ್ ತಿಂಗಳಲ್ಲಿ ನಡೆದಿದ್ದು, ಎರಡನೇ ಹಂತದ ಎರಡು ದಿವಸದ ಕಾರ್ಯಗಾರ ಇಂದು ನಡೆಯಿತು.
ಝಕಿಯಾ ಖತೀಜಾ (ತಲ್ವಾ ಆಂಗ್ಲ ಮಾಧ್ಯಮ ಶಾಲೆ ಪಂಪೈಲ್), ಆಯಿಷಾ ತನ್ನೀಂ (ಹಿರಾ ಶಾಲೆ ಬಬ್ಬುಕಟ್ಟೆ), ಖಾಝಿ ಸನಾ (ಝಿಯಾ ಆಂಗ್ಲ ಮಾಧ್ಯಮ ಶಾಲೆ, ಕಂಡಲೂರ್, ಕುಂದಾಪುರ), ಮಂಜುಶಾ (ಕ್ರಸೆಂಟ್ ಆಂಗ್ಲ ಮಾಧ್ಯಮ ಶಾಲೆ, ಕಾಪು), ಕುರೇಶ ನುಸ್ರತ್ (ಸ್ನೇಹ ಪಬ್ಲಿಕ್ ಸ್ಕೂಲ್, ಪಕ್ಕಲಡ್ಕ ಬಜಲ್ಲಿ, ತಸ್ಲಿಮಾ (ಅಂಜುಮನ್ ವಿದ್ಯಾ ಸಂಸ್ಥೆ ಜೋಕಟ್ಟೆ) ಈ 6 ಶಿಕ್ಷಕರನ್ನು ಈ ಕಾರ್ಯಗಾರದಲ್ಲಿ ಉತ್ತಮ ತರಬೇತುದಾರರಾಗಿ ಆಯ್ಕೆ ಮಾಡಲಾಯಿತು.












