ಮುಂಬೈಯಲ್ಲಿ ಮತ್ತಷ್ಟು ತೀವ್ರಗೊಂಡ ಕೊರೋನಾ: ಫೈವ್ ಸ್ಟಾರ್ ಹೊಟೇಲ್ ಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲು ತೀರ್ಮಾನ

0
514

ಸನ್ಮಾರ್ಗ ವಾರ್ತೆ

ಮುಂಬೈ: ಕೊರೋನಾ ಎರಡನೇ ಅಲೆ ಮತ್ತಷ್ಟು ತೀವ್ರಗೊಂಡಿರುವ ಮುಂಬೈಯಲ್ಲಿ ಆಸ್ಪತ್ರೆಯಲ್ಲಿ ಸದ್ಯ ಬೆಡ್ ಇಲ್ಲದಂತಾಗಿದೆ. ರೋಗಿಗಳು ತುಂಬಿಕೊಂಡಿರುವುದರಿಂದ ಮುಂಬೈಯ ಫೈವ್ ಸ್ಟಾರ್ ಮತ್ತು ಫೋರ್ ಸ್ಟಾರ್ ಹೊಟೇಲುಗಳನ್ನು ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದು ಬ್ರಹನ್ಮುಂಬಯಿ ಮಹಾನಗರಪಾಲಿಕೆ ತಿಳಿಸಿದೆ.

ವಾರದೊಳಗೆ ಮೂರು ಜಂಬೊ ಫೀಲ್ಡ್ ಆಸ್ಪತ್ರೆಗಳನ್ನು ತೆರೆಯಲಾಗುವುದು ಎಂದು ಅದು ತಿಳಿಸಿದೆ.

ಮುಂಬೈ ಮತ್ತು ಹತ್ತಿರದ ಪ್ರದೇಶಗಳಲ್ಲಿರುವ ಫೋರ್ ಸ್ಟಾರ್ ಹೊಟೇಲು, ಫೈವ್ ಸ್ಟಾರ್ ಹೊಟೇಲುಗಳನ್ನು ರೋಗಿಗಳಿಗಾಗಿ ಕೊರೋನ ಕೇರ್ ಸೆಂಟರ್ ಆಗಿ ಮಾಡಿ ಸೌಕರ್ಯಗಳನ್ನು ಏರ್ಪಡಿಸಲು ಕೂಡಲೇ ಆಗ್ರಹಿಸಲಾಗುವುದು ಎಂದು ಬಿಎಂಸಿ ಕಮಿಷನರ್ ಇಕ್ಬಾಲ್ ಸಿಂಗ್ ಚಹಲ್ ಹೇಳಿದರು.

ಕೊರೋನ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದ ಥಾಣೆಯಲ್ಲಿ 24 ಗಂಟೆಗಳೊಳಗೆ 49,971 ಮಂದಿ ಕೊರೊನ ಪೀಡಿತರಾಗಿದ್ದಾರೆ.

ಆಕ್ಸಿಜನ್, ಮದ್ದು, ಆಂಟಿವೈರಸ್ ಇಂಜೆಕ್ಷನ್ ಅಡಚಣೆ ರಹಿತವಾಗಿ ಸಿಗುವಂತೆ ಮಾಡುವುದಕ್ಕಾಗಿ ರಾಜ್ಯ ಸರಕಾರ ಕ್ರಮಕ್ಕಿಳಿದಿದೆ. ಮಾತ್ರವಲ್ಲ, ಹಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಬೆಡ್‍ಗಳ ಏರ್ಪಾಡು ಮಾಡಲಾಗಿದೆ.

ಇಡೀ ರಾಜ್ಯದಲ್ಲಿ ಲಾಕ್ ಡೌನ್ ಹಾಕುವ ಬಗ್ಗೆ ನಾಳೆ ತೀರ್ಮಾನವಾಗಲಿದೆ. ಈಗಿನ ರಾತ್ರಿ ಕರ್ಫ್ಯೂ ಎಪ್ರಿಲ್ 30ರವರೆಗೆ ಮುಂದುವರಿಯಲಿರುವುದಾಗಿ ಮಹಾರಾಷ್ಟ್ರ ಸರಕಾರ ತಿಳಿಸಿದೆ.