ರಾಜ್ಯಗಳು ರೈತ ಕಾಯ್ದೆಯನ್ನು ವಿರೋಧಿಸಲೇಬೇಕು: 180 ರೈತ ಸಂಘಟನೆಗಳ ಒಕ್ಕೂಟ ಆಗ್ರಹ

0
416

ಸನ್ಮಾರ್ಗ ವಾರ್ತೆ

ನವದೆಹಲಿ,ಅ.16:ಕೇಂದ್ರ ಸರಕಾರದ ರೈತ ಕಾಯ್ದೆಯ ವಿರುದ್ಧ ಎಲ್ಲ ರಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿ ಅದನ್ನು ಪ್ರತಿಭಟಿಸಬೇಕು ಎಂದು ರಾಷ್ಟ್ರೀಯ ಕಿಸಾನ್ ಮಹಾ ಸಂಗ್ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಕೊಟ್ಟಿದೆ.

ಕೃಷಿಗೆ ಸಂಬಂಧಿಸಿದ ರಾಜ್ಯಗಳ ಹಕ್ಕುಗಳ ಮೇಲೆ ಕೇಂದ್ರ ಸರಕಾರವು ದಾಳಿ ಮಾಡಿದೆ. ಆದ್ದರಿಂದ ರಾಜ್ಯಗಳು ಕೇಂದ್ರ ಸರಕಾರದ ರೈತ ಕಾಯ್ದೆಯನ್ನು ವಿರೋಧಿಸಿ ತಮ್ಮದೇ ಕಾಯ್ದೆಯನ್ನು ರೂಪಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಗ್ಯಾರಂಟಿಯನ್ನು ಒದಗಿಸುವ ಕಾನೂನು ರಚಿಸಬೇಕು ಎಂದು ಆಗ್ರಹಿಸಿದೆ.