ಫೆಲಸ್ತೀನಿಯರ ರಕ್ತ ಸುರಿಸುವುದನ್ನು ನಿಲ್ಲಿಸಿ- ವಿಶ್ವಸಂಸ್ಥೆಯಲ್ಲಿ ಕತರ್ ಆಗ್ರಹ

0
4283

ಸನ್ಮಾರ್ಗ ವಾರ್ತೆ

ದೋಹ: ಫೆಲಸ್ತೀನಿಯರ ರಕ್ತ ಸುರಿಸುವುದನ್ನು ನಿಲ್ಲಿಸಬೇಕೆಂದು ಮತ್ತು  ಅಸ್ಥಿರತೆಗೆ ಆ ವಲಯವನ್ನು ದೂಡಿ ಹಾಕಬಾರದೆಂದು ಮತ್ತು ಕೂಡಲೇ ರಾಜತಾಂತ್ರಿಕ ಮಾರ್ಗಗಳ ಮೂಲ ಪರಿಹಾರಕ್ಕೆ ಮುಂದಾಗಬೇಕೆಂದು ಕತರ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹತ್ತನೇ ತುರ್ತು ಸಮ್ಮೇಳನದಲ್ಲಿ ಕತರ್ ನ ಕಾಯಂ ಪ್ರತನಿಧಿ ಶೈಖ್ ಅಲ್‍ಯಾ ಅಹ್ಮದ್ ಸೈಫ್ ಅಲ್ತಾನಿ ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹತ್ತನೇ ತುರ್ತು ಸಭೆಯ ಅಧಿವೇಶನ ಪುನರಾರಂಭಿಸಿರುವುದಕ್ಕೆ ಅವರು ಕೃತಜ್ಞತೆ ಸೂಚಿಸಿದರು.

ಅರಬ್‍ಗ್ರೂಪ್, ಒಐಸಿ ಗ್ರೂಪ್, ಜಿಸಿಸಿ ಗ್ರೂಪ್ ಸಲ್ಲಿಸಿದ್ದ ಪ್ರಸ್ತಾವದಲ್ಲಿ ಕತರ್ ತನ್ನ ಧ್ವನಿಯನ್ನು ಸೇರಿಸಿತು. ಹತ್ತನೇ ತುರ್ತು ಅಧಿವೇಶನ ಪುನರಾರಂಭಿಸಿದ್ದು ನಿರ್ಣಾಯಕ ಸಮಯದಲಿ ಮತ್ತು ಸಂದರ್ಭದಲ್ಲಿ ಆಗಿದೆ. ನಿರಪರಾಧಿಗಳಾದ ಜನಸಾಮಾನ್ಯರನ್ನುಇಸ್ರೇಲ್ ದಾಳಿ ಮಾಡಿ ಗಾಝದಲ್ಲಿ ಕೊಲ್ಲುತ್ತಿದೆ. ಅಲ್ಲಿನ ಪರಿಸ್ಥಿತಿ ವಿನಾಶಕರವಾಗಿ ಬದಲಾಯಿತು ಎಂದು ಶೈಖ್ ಅಲ್‍ಯಾ ಅಹ್ಮದ್ ಸೈಪ್ ಅಲ್‍ಥಾನಿ ಹೇಳಿದರು.

ವಲಯ ಮತ್ತು ಜಗತ್ತಿನ ಸುರಕ್ಷೆಗೆ ಶಾಂತಿಗೆ ಗಂಭೀರವಾದ ಆಘಾತವನ್ನು ಇಸ್ರೇಲಿನ ದಾಳಿ ಸೃಷ್ಟಿಸುತ್ತಿದೆ. ಚಾರ್ಟರ್ ಪ್ರಕಾರ ಭದ್ರತಾ ಸಮಿತಿ ಅದರ ಹೊಣೆಗಾರಿಕೆ ವಹಿಸಿಕೊಳ್ಳುವಲ್ಲಿ ವಿಫಲವಾಗಿದ್ದಕ್ಕೆ ಕತರ್ ಸರಕಾರ ವಿಷಾಧ ಪ್ರಕಟಿಸುತ್ತಿದೆ ಎಂದು ಮತ್ತು ತುರ್ತು ಯುದ್ಧ ವಿರಾಮ ಜಾರಿಗೆ ತರಲು ಕಡ್ಡಾಯ ಪ್ರಸ್ತಾವ ಸ್ವೀಕರಿಸುವುದರಲ್ಲಿಯೂ ಭದ್ರತಾ ಸಮಿತಿ ವಿಫಲವಾಗಿದೆ ಎಂದು ಅಲ್‍ಯಾ ಅಲ್‍ಥಾನಿ ಹೇಳಿದರು.