ಗಂಭೀರವಾಗಿ ಕೊರೊನ ಬಾಧಿಸಿದವರು ಒಂದೆರಡು ವರ್ಷ ಕಠಿಣ ಕೆಲಸದಿಂದ ದೂರವಿರಿ- ಕೇಂದ್ರ ಆರೋಗ್ಯ ಸಚಿವರು

0
162

ಸನ್ಮಾರ್ಗ ವಾರ್ತೆ

ಅಹ್ಮದ್‍ಬಾದ್: ಗಂಭೀರವಾಗಿ ಕೊರೊನ ಬಂದವರು ಒಂದೆರಡು ವರ್ಷಗಳಿಗೆ ಕಠಿಣವಾಗಿ ದುಡಿಯಬೇಡಿ. ಅಂತಹ ಕೆಲಸಗಳು ಸದ್ಯ ಬೇಡ ಎಂದು ಕೇಂದ್ರ ಆರೋಗ್ಯ ಸಚಿವ ಮನ್‍ಸೂಕ್ ಮಾಂಡವ್ಯ ಹೇಳಿದ್ದಾರೆ.

ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ನಡೆಸಿದ ಅಧ್ಯಯನದ ಆಧಾರದಲ್ಲಿ ಸಚಿವರು ಈ ಮಾತು ಹೇಳಿದ್ದಾರೆ.

ಗುಜರಾತಿನಲ್ಲಿ,,  ವಿಶೇಷವಾಗಿ ಸೌರಾಷ್ಟ್ರ ಪ್ರದೇಶದಲ್ಲಿ ಹೃದಯಕ್ಕೆ ಸಂಬಂಧಿಸಿದ ಕೇಸುಗಳಲ್ಲಿ ಹೆಚ್ಚಳವಾಗಿದೆ. ಯುವಕರೇ ಮೃತ ಪಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಚಿವರು ಕಠಿಣ ಕೆಲಸಗಳಿಂದ ದೂರವಿರುವಂತೆ ಸೂಚಿಸಿದ್ದಾರೆ.

ನವರಾತ್ರಿಗೆ ಗುಜರಾತಿನಲ್ಲಿ ನಡೆದ ಗರ್ಭ ನೃತ್ಯ ಮಾಡಿದ ಹದಿಮೂರು ವರ್ಷದ ಸಹಿತ ಹತ್ತು ಮಂದಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿತ್ತು. ನವರಾತ್ರೆಯ ಮೊದಲ ಆರು ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ತೊಂದರೆ ಹೇಳಿಕೊಂಡು 108 ನಂಬರಿನ ಆಂಬುಲೆನ್ಸ್ ಸೇವೆಗೆ 521 ಫೋನ್ ಕರೆಗಳು ಬಂದಿವೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊರೊನ ಪೀಡಿತರು ಕಠಿನ ಕೆಲಸದಿಂದ ದೂರವಿರುವಂತೆ ಸಚಿವ ಮನವಿ ಮಾಡಿದ್ದಾರೆ.