ಪಾರ್ಲಿಮೆಂಟಿನಲ್ಲಿ ಕ್ಯಾಂಟಿನ್ ಸಬ್ಸಿಡಿಗೆ ಕತ್ತರಿ: 6 ರೂ.ಗೆ ಮಸಾಲ ದೋಸೆ ಸಿಗುವುದಿಲ್ಲ

0
415

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಂಸದರು ಮತ್ತು ಇತರರಿಗೆ ಊಟ ಕೊಡುವ ಪಾರ್ಲಿಮೆಂಟಿನ ಕ್ಯಾಂಟಿನ್‍ನ ಸಬ್ಸಿಡಿ ತೆರವುಗೊಳಿಸಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈ ವಿಷಯವನ್ನು ತಿಳಿಸಿದ್ದು ಇದರಿಂದ ವರ್ಷಕ್ಕೆ ಎಂಟು ಕೋಟಿ ರೂಪಾಯಿ ಲಾಭವನ್ನು ಅವರು ಲೆಕ್ಕ ಹಾಕಿದ್ದಾರೆ.

ಮಾಹಿತಿ ಹಕ್ಕು ಕಾನೂನು ಪ್ರಕಾರ ಮಟನ್ ಕಟ್ಲೆಟ್‍ಗೆ 18 ರೂ, ಎಲುಬು ರಹಿತ ಮಟನ್ ಕರಿಗೆ 20 ರೂಪಾಯಿ, ಮಸಾಲ ದೋಸೆಗೆ ಆರು ರೂಪಾಯಿ ಸಬ್ಸಿಡಿಯಲ್ಲಿ ಸಿಗುತ್ತಿತ್ತು. ಆದರೆ, ಸಬ್ಸಿಡಿ ತೆಗೆದ ನಂತರ ಇವೆಲ್ಲಕ್ಕೆ ಎಷ್ಟು ಬೆಲೆ ಏರಿಕೆಯಾಗಿದೆ ಎಂಬ ವಿವರ ಸಿಕ್ಕಿಲ್ಲ. ಜನವರಿ 29ಕ್ಕೆ ಪಾರ್ಲಿಮೆಂಟು ಸಮ್ಮೇಳನ ನಡೆಯಲಿರುವ ಪಾರ್ಲಿಮೆಂಟು ಅಧಿವೇಶನ ಕುರಿತು ಮಾಹಿತಿ ನೀಡಿದ ಸಂದರ್ಭದಲ್ಲಿ ಸಬ್ಸಿಡಿ ತೆರವುಗೊಳಿಸಿದ ವಿವರವನ್ನು ಸ್ಪೀಕರ್ ತಿಳಿಸಿದ್ದಾರೆ.

52 ವರ್ಷಗಳಿಂದ ಪಾರ್ಲಿಮೆಂಟು ಕ್ಯಾಂಟೀನ್ ಸಬ್ಸಿಡಿಯಲ್ಲಿ ನಡೆಯುತ್ತಿತ್ತು. ಅದನ್ನು ‌ಉತ್ತರ ರೈಲ್ವೆ ವಿಭಾಗ ವಹಿಸಿಕೊಂಡಿತ್ತು. ಪಾರ್ಲಿಮೆಂಟಿನ ಕ್ಯಾಂಟಿನ್‍ನ ವಾರ್ಷಿಕ ಆದಾಯ 15 ರಿಂದ 18 ಕೋಟಿ ರೂಪಾಯಿವರೆಗೂ ಇತ್ತು. ಈ ವರ್ಷದಿಂದ ಇಂಡಿಯನ್ ಟೂರಿಸಂ ಡೆವಲಪ್ಮೆಂಟ್ ಕ್ಯಾಂಟಿನ್ ನಡೆಸಲಿದೆ.