ಆನ್‍ಲೈನ್ ಗೇಮ್‍ನಲ್ಲಿ ಸೋಲು: ಹೈದರಾಬಾದಿನಲ್ಲಿ ಟೆಕ್ಕಿ ಆತ್ಮಹತ್ಯೆ

0
431

ಸನ್ಮಾರ್ಗ ವಾರ್ತೆ

ಹೈದರಾಬಾದ್: ಆನ್‍ಲೈನ್ ಗೇಮ್‍ನಲ್ಲಿ ಸೋತ ಕಾರಣಕ್ಕೆ ಹೈದರಾಬಾದಿನ 28 ವರ್ಷದ ಸಾಫ್ಟ್‌ವೇರ್ ಇಂಜಿನೀಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಆನ್‍ಲೈನ್ ಗೇಮ್ ಆಡಿ ಸೋತು ಭಾರೀ ಮೊತ್ತರ ಹಣಕಳಕೊಂಡಿದ್ದ ಯುವಕ ಸಾಲದ ಬಾಧೆಯಿಂದ ನಲುಗಿದ್ದ. ಆನ್‍ಲೈನ್ ಗೇಮ್‍ನಲ್ಲಿ ಎಷ್ಟು ಹಣ ಕಳಕೊಂಡಿದ್ದಾನೆ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ಹೇಳಿದರು.

ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸಕ್ಕಿದ್ದ ಈತ ಕೊರೋನದ ನಂತರ ವರ್ಕ್ ಫ್ರಮ್ ಹೋಮ್ ಆಗಿ ಕೆಲಸ ಮಾಡುತ್ತಿದ್ದ. ಬಹಳ ಸಮಯವಾಯಿತು ಮಗ ಹೊರಗೆ ಬಂದಿಲ್ಲ ಎಂದು ತಾಯಿ ಕೋಣೆಗೆ ಹೋಗಿ ನೋಡಿದಾಗ ನೇಣು ಹಾಕಿಕೊಂಡು ಸ್ಥಿತಿಯಲ್ಲಿ ಟಕ್ಕಿ ಕಂಡುಬಂದಿದ್ದನು. ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ ಮಗ ಮಾನಸಿಕವಾಗಿ ಜರ್ಜರಿತನಾಗಿದ್ದ ಎಂದು ತಂದೆ-ತಾಯಿ ತಿಳಿಸಿರುವುದಾಗಿ ವರದಿಯಾಗಿದೆ.